ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಒಪನ್ ಜಿಮ್ ಗಳ ಉದ್ಘಾಟನೆ ಹಾಗೂ ಯು.ಕೆ.ಜಿ.ವಿದ್ಯಾರ್ಥಿಗಳ ಪದವಿ ಪ್ರಧಾನ

ಬೀದರ :ಮಾ.28:ನಗರದ ಬೆನಕನಹಳ್ಳಿ ರಸ್ತೆಯಲ್ಲಿ ಇರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಬುಧುವಾರ ದಂದು ಒಪನ್ ಜಿಮ್ ಗಳ ಉದ್ಘಾಟನೆ ಹಾಗೂ ಯು.ಕೆ.ಜಿ 2023-2024 ಬ್ಯಾಚನ ಬೆನಕನಹಳ್ಳಿ,ಶಿವನಗರ ಮತ್ತು ಕುಂಬರವಾಡಾದ 3 ಶಾಖೆಯ ಮಕ್ಕಳಿಗೆ ಯು.ಕೆ.ಜಿ ಪದವಿ ಪ್ರಧಾನ ಸಂಭ್ರಮ ನಡೆಯಿತು. ಯು.ಕೆ.ಜಿ ಮಕ್ಕಳ ಪದವಿ ಪ್ರಧಾನ ಸಮಾರಂಭವು ಅತೀ ಸಂಭ್ರಮದಿಂದ ಜರಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ|| ಕೆ.ಸಿ.ವೀರಣ್ಣ ಕುಲಪತಿಗಳು,ಕರ್ನಾಟಕ ಪಶುವೈದ್ಯಕೀಯ,ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬೀದರ ಅವರು ಒಪನ್ ಜಿಮ್ ಗಳ ಉದ್ಘಾಟಿಸಿದರು. ತದನಂತರ ಯು.ಕೆ.ಜಿ ಮಕ್ಕಳ ಪದವಿ ಪ್ರಧಾನ ಸಮಾರಂಭವನ್ನು ಉದ್ದೇಸಿಸಿ ಮಾತನಾಡಿ ಶಿಕ್ಷಣವು ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಬದಲಾವಣೆಯಾಗಿ ಸಮಾಜಕ್ಕೆ ಅನುಕೂಲಕರವಾಗಿ ಅವರು ನಡೆದುಕೊಳ್ಳುವಂತೆ ಮಾಡುವುದಾಗಿದೆ.ಅವರನ್ನು ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದಾಗಿದೆ ಮತ್ತು ಈ ನೀಟ್ಟಿನಲ್ಲಿ ಗ್ಲೋಬಲ್ ಸೈನಿಕ ಅಕಾಡೆಮಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಪಾಲಕರು ತಮ್ಮ ಮಕ್ಕಳ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಅದೇ ಕ್ಷೇತ್ರದಲ್ಲೆ ಅವರಿಗೆ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸಬೇಕು ಎಂದರು. ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ವಿವಿಧ ವಿಭಿನ್ನ ಚಟುವಟಿಕೆಗಳ ಸಹಿತ ಈ ಭಾಗದಲ್ಲಿ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ. ಎಂದು ಸಂತಸ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಮಕ್ಕಳು ವಿಶೇಷ ಉಡುಗೆಯನ್ನು ಧರಿಸಿ ಸಂಭ್ರಮಿಸಿ, ಒಂದನೇ ತರಗತಿಗೆ ಮಕ್ಕಳು ಪ್ರವೇಶ ಪಡೆದ ನಿಮಿತ್ತ ಖುಷಿಯಲ್ಲಿ ತೇಲಾಡುತಿದ್ದರು. ಯು.ಕೆ.ಜಿ ಮಕ್ಕಳಿಂದ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು,ಪೂರ್ವ ಪ್ರಾಥಮಿಕ ಶಿಕ್ಷಕರು ತಮ್ಮ ಅನುಭವವನ್ನು ಹಂಚಿಕೊಂಡರು. ಫೌಂಡೇಶನ್ ಸ್ಟೇಜ್ ಉಸ್ತುವಾರಿಯಾದ ಡಾ.ಮನಿಷ ಚಾಕಡೆ ವಾರ್ಷಿಕ ವರದಿ ಪ್ರಕಟಿಸಿದರು. ಮಕ್ಕಳು ಈ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಹಲವಾರು ಚಟುವಟಿಕೆಗಳ ಬಗ್ಗೆ ವಿಸ್ತ್ರತವಾದ ವರದಿ ನೀಡಿದರು. ಇಡಿ ವರ್ಷದಲ್ಲಿ ಕೈಗೋಂಡ ಹಲವಾರು ಚಟುವಟಿಕೆಗಳ ವಿವರಣೆಯ ಛಾಯಾ ಚಿತ್ರಗಳ ಮೂಲಕ ದರ್ಶಕರಿಗೆ ಪ್ರದರ್ಶಿಲಾಯಿತು.
ಕರ್ನಲ್ ಶರಣಪ್ಪ ಸಿಕೇನ್ಪೂರೆ ಮಾತನಾಡಿ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಎರಡು ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು,ಮಕ್ಕಳಿಗೆ ಆಟೋಟಗಳ ಜೊತೆಗೆ ಪಾಠ ಕಲಿಸುವ ಗುರಿ ಹೊಂದಿದೆ ಮತ್ತು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಶಿಕ್ಷಣ ನೀಡುತ್ತಿದೆ ಮಕ್ಕಳ ಸರ್ವಾಂಗಿಣ ಅಭಿವೃದಿಗಾಗಿ ಜಿಎಸ್‍ಎ ಇದ್ದಕ್ಕೇಂದೆ ಬೇಸಿಗೆ ಶಿಬಿರ ಕೂಡ ದಿನಾಂಕ16.04.2024 ರಂದು ವಿಭಿನ್ನ ಚಟುವಟಿಕೆಗಳೊಂದಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕರ್ನಲ್ ಶರಣಪ್ಪ ಸಿಕೇನ್ಪೂರೆ ಅಧ್ಯಕ್ಷರು ಗ್ಲೋಬಲ್ ಸೈನಿಕ ಅಕಾಡೆಮಿ ಬೀದರ, ಡಾ.ವಿಠ್ಠಲ್ ರೆಡ್ಡಿ ಪ್ರಾಂಶುಪಾಲರು ಬಿ.ವಿ.ಬಿ ಕಾಲೇಜು, ಸಿ.ಆರ್.ಪಿ ಶ್ರೀ ಮಾಣಿಕಪವಾರ, ಶ್ರೀ ಶಿವಕುಮಾರ,ಮುಖ್ಯ ಗುರುಗಳಾದ ಜ್ಯೋತಿ ರಾಗ,ಪಿ.ಆರ್.ಓ.ಕಾರಂಜಿ ಸ್ವಾಮಿ,ಫೌಂಡೇಶನ್ ಸ್ಟೇಜ್ ಪ್ರಿನ್ಸಿಪಾಲ್ ರಾದ ಡಾ.ಮನಿಷಾ ಚಾಕೆಡ,ಪಾಲಕರು,ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.