ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ದೀಪಾವಳಿ ಆಚರಣೆ

ಬೀದರ: ನ.17:ನಗರದ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿನ ಗ್ಲೋಬಲ್ ಸೈನಿಕ ಅಕಾಡೆಮಿ ಮುಖ್ಯ ಶಾಖೆಯಲ್ಲಿ ರವಿವಾರ ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಅವರು ಲಕ್ಷ್ಮಿ ಪೂಜೆ ಮಾಡಿ ಎಲ್ಲರಿಗೂ ದೀಪಾವಳಿಯ ಶುಭ ಕೋರಿದರು.

ನಂತರ ಮಾತನಾಡಿದ ಅವರು, ಯಾವುದೇ ಒಂದು ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಸರಸ್ವತಿಯ ಜೊತೆಗೆ ಲಕ್ಷ್ಮಿಯ ಕೃಪೆಯು ಇರಬೇಕು. ತುಂಬ ಬುದ್ಧಿ ಇದ್ದರು ಕೆಲವೊಮ್ಮೆ ಧನಾಗಮ ದೇವಿ ಲಕ್ಷ್ಮಿಯ ಕೃಪೆ ಇಲ್ಲದಿದ್ದರೆ ಸಾಧನೆ ಸಾಧ್ಯ ಇಲ್ಲ. ಅದಕ್ಕೆ ಸರಸ್ವತಿ ಮತ್ತು ಲಕ್ಷ್ಮಿಯ ಕೃಪೆ ನಮಗೆ ಬೇಕು ಎಂದು ಲಕ್ಷ್ಮಿಯನ್ನು ಧ್ಯಾನಿಸಿ ದೇವಿಯ ಕೃಪೆ ಸದಾ ನಮ್ಮ ಸಂಸ್ಥೆಯ ಮೇಲೆ ಇರಲಿ ಎಂದು ಪ್ರಾರ್ಥಿಸಿದರು.

ಕೋವಿಡ್- 19 ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲಿಯೂ ನಮ್ಮ ಸಿಬ್ಬಂದಿಗಳ ಒಳ್ಳೆಯ ಕಾರ್ಯ ಪ್ರವೃತ್ತಿ, ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಬೆಂಬಲ ತೋರಿಸುತ್ತಿದ್ದಾರೆ. ಅವರ ಆತ್ಮೀಯತೆಗಾಗಿ ಸಂಸ್ಥೆಯು ಅಧ್ಯಕ್ಷರು ಹೆಮ್ಮೆ ವ್ಯಕ್ತಪಡಿಸಿದರು, ಇದೆ ರೀತಿಯ ಸೇವೆಯನ್ನು ಸಲ್ಲಿಸಿದರೆ ಶಾಲೆಯು ಉನ್ನತ ಮಟ್ಟಕ್ಕೆ ಬೆಳೆಯುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸುಖದ ಸಮಯದಲ್ಲಿ ಎಲ್ಲೋರು ಜೊತೆ ಇರುತ್ತಾರೆ ಆದರೆ ಕಷ್ಟದ ಸಂಧರ್ಭದಲ್ಲಿ ಜೊತೆ ಇರುವ ನಿಮ್ಮೆಲ್ಲರ ಸಹಕಾರ ತುಂಬಾ ಸಂತೋಷ ತಂದಿದೆ. ಕತ್ತಲೆ ಸರಿದು ಸೂರ್ಯನ ಬೆಳಕು ಹೇಗೆ ಬರುತ್ತದೆಯೂ ಹಾಗೆ ಕೊರೋನಾ ಮಹಾ ಮಾರಿಯ ಕತ್ತಲು ಸರಿದು ಮತ್ತೆ ಯಥಾ ರೀತಿಯ ಜೀವನ ಖಂಡಿತ ಪ್ರಾರಂಭವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಕರ್ನಲ್ ಅವರು ಸಿಬ್ಬಂದಿಗಳಿಗೆ ಹಬ್ಬದ ಉಡುಗೊರೆ ಮತ್ತು ಸಿಹಿ ಹಂಚಿ ಅವರ ಮನೋಬಲ ಹೆಚ್ಚಿಸಿದರು.

ಈ ವೇಳೆ ಮುಖ್ಯ ಗುರು ಜ್ಯೋತಿ ರಾಗಾ, ಪಿ.ಆರ್.ಓ ಕಾರಂಜಿ, ಆಡಳಿತ ವ್ಯವಸ್ಥಾಪಕ ಮಡೆಪ್ಪ, ದೈಹಿಕ ಶಿಕ್ಷಕ ಅಶೋಕ, ಸಿಬ್ಬಂದಿಗಳಾದ ಪ್ರಹ್ಲಾದ್, ಸಚಿನ್, ನಿಕಿತಾ, ಸಾಧನಾ, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.