
ವರನಟ ಡಾ. ರಾಜ್‍ಕುಮಾರ್ ಕುಟುಂಬದ ಕುಡಿ, ಅಣ್ಣಾವ್ರ ಪುತ್ರಿ ಪೂರ್ಣಿಮಾ-ರಾಮ್ ಕುಮಾರ್ ದಂಪತಿಯ ಪುತ್ರಿ. ಧನ್ಯ ರಾಮ್ ಕುಮಾರ್, ಒಂದರ ಹಿಂದೆ ಒಂದು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ನಟಿಯಾಗುವತ್ತ ಹೆಜ್ಜೆ ಹಾಕಿದ್ದಾರೆ.
ಧನ್ಯರಾಮ್‍ಕುಮಾರ್ ಅವರ ಕೈಯಲ್ಲಿ “ಕಾಲಾಪತ್ಥರ್”,ಪೌಡರ್, ಹೈಡ್ ಅಂಡ್ ಸೀಕ್, ಎಲ್ಲಾ ನಿನಗಾಗಿ. ಸೇರಿದಂತೆ ಹಲವು ಚಿತ್ರಗಳಿವೆ. ಈ ನಡುವೆ ವಿವಿಧ ಕಾರಣದಿಂದ “ಬೆಳ್ಳಿ ಕಾಲುಂಗುರ” ಚಿತ್ರದಲ್ಲಿ ನಟಿಸುವುದರಿಂದ ಹಿಂದೆ ಸರಿದಿದ್ದಾರೆ.
ತಮ್ಮ ಬಳಿ ಇರುವ ಚಿತ್ರಗಳು ಸೇರಿದಂತೆ ಹಲವು ವಿಷಯಗಳನ್ನು ನಟಿ ಧನ್ಯ ರಾಮ್‍ಕುಮಾರ್ ಮುಕ್ತವಾಗಿ ಹಂಚಿಕೊಂಡರು, ಇನ್ನು ಅವರೇ ಮಾತಗಳಲ್ಲಿ.., ಯಾವುದೇ ಚಿತ್ರದ ಕಥೆ ಬಂದರೆ ಅಮ್ಮ, ನಾನು ಕೇಳುತ್ತೇವೆ. ಇಷ್ಟ ಆದರೆ ಅಪ್ಪನಿಗೆ ಹೇಳುತ್ತೇವೆ. ಆ ನಂತರ ಅಣ್ಣ, ಹಾಗು ಕುಟುಂಬದ ಇತರೆ ಸದಸ್ಯರಿಗೆ ಮಾಹಿತಿ ನೀಡುತ್ತೇವೆ. ಮಾಡುವ ಚಿತ್ರದ ಕಥೆ ಪ್ರೇಕ್ಷಕರ ಅಭಿಮಾನಿ ದೇವರುಗಳಿಗೆ ಇಷ್ಟವಾಗಬೇಕು. ಅಂತಹ ಚಿತ್ರವನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ.
ಕಾಲಾಪತ್ಥರ್ ಚಿತ್ರದಲ್ಲಿ ಹಳ್ಳಿಯ ಹುಡುಗಿ ಪಾತ್ರ. ಪೌಡರ್ ಚಿತ್ರದಲ್ಲಿ ಕಾಮಿಡಿ ಜಾನರ್ ನಿಂದ ಕೂಡಿರುವ ಸಿನಿಮಾ,ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಉದ್ದೇಶವಿದೆ.
ಇನ್ನೂ ಗ್ಲಾಮರ್ ವಿಷಯಕ್ಕೆ ಬರುವುದಾದರೆ ನನ್ನದೇ ಆದ ಚೌಕಟ್ಟು ಹಾಕಿಕೊಂಡಿದ್ದೇನೆ. ನನ್ನ ತಾತ ಒಂದು ವೇಳೆ ಜೊತೆಯಲ್ಲಿ ಚಿತ್ರ ನೋಡಿದರೂ ಅವರಿಗೂ ಮುಜಗರವಾಗಬಾರದು ಅಂತಹ ಪಾತ್ರ ಮಾಡುವಾಸೆ ಎಂದು ಹೇಳಿಕೊಂಡರು.
ನನಗೆ ಮಿಸ್ಟ್ರಿ ಜಾನರ್ ಕಥೆ ಇಷ್ಟ. ಈ ಮಾದರಿಯ ಹೆಚ್ಚು ಸಿನಿಮಾಗಳನ್ನು ನಾನೂ ನೋಡುತ್ತೇನೆ. ಅವಕಾಶ ಸಿಕ್ಕರೆ ಈ ಮಾದರಿಯ ಚಿತ್ರಗಳಲ್ಲಿ ನಟಿಸುವೆ. ಸದ್ಯಕ್ಕೆ ಬೇರೆ ಭಾಷೆಗಳಿಂದ ಯಾವುದೇ ಅವಕಾಶ ಬಂದಿಲ್ಲ. ಬಂದಿಲ್ಲದ ಅವಕಾಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು
ನಾಟಕದಲ್ಲಿ ಅಭಿನಯಿಸುವಾಸೆ
ನಾಟಕಗಳಲ್ಲಿ ನಟಿಸುವ ಆಸೆ ಇದೆ. ಅಭಿನಯದ ಬಗ್ಗೆ ತರಬೇತಿ ಪಡೆಯುತ್ತಿದ್ದ ಸಮಯದಲ್ಲಿ ನಾಟಕದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಷ್ಟರೊಳಗೆ ಸಿನಿಮಾನದಲ್ಲಿ ಅವಕಾಶ ಬಂದ ಹಿನ್ನೆಲೆಯಲ್ಲಿ ನಾಟಕದಲ್ಲಿ ನಟಿಸಲು ಆಗಲಿಲ್ಲ.ಮುಂದೊಂದು ದಿನ ಅವಕಾಶ ಸಿಕ್ಕರೆ ನಾಟಕದಲ್ಲಿ ನಟಿಸುವ ಉದ್ದೇಶವಿದೆ ಎಂದರು ನಟಿ ಧನ್ಯ ರಾಮ್‍ಕುಮಾರ್.
ತಾತ ( ಡಾ.ರಾಜ್ ಕುಮಾರ್ ) ಅವರು ರಂಗಭೂಮಿಯಿಂದ ಬಂದವರು.ಹೀಗಾಗಿ ನಾಟಕದಲ್ಲಿ ನಟಿಸುವ ಉದ್ದೇಶವಿದೆ ಎಂದು ತಮ್ಮ ಮನದಾಳ ಹಂಚಿಕೊಂಡರು.
ಅವಕಾಶ ಬಂದರೆ ನಟಿಸುವೆ
ನಮ್ಮದೇ ಕುಟುಂಬದ ಅನೇಕ ಬ್ಯಾನರ್‍ಗಳಿವೆ. ಶಿವಣ್ಣ ಮಾಮ, ಅಶ್ವಿನಿ ಅಂಟಿ ಸೇರಿದಂತೆ ಕುಟುಂಬದ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಬಂದರೆ, ಒಳ್ಳೆಯ ಪಾತ್ರ ಸಿಕ್ಕರೆ ಅವರು ನನಗಾಗಿ ಚಿತ್ರ ನಿರ್ಮಾಣ ಮಾಡಬಹುದು, ಒಳ್ಳೆಯ ಕತೆ ಪಾತ್ರ ಸಿಕ್ಕಬೇಕಲ್ಲವೇ . ನಾನಂತೂ ಆಶಾವವಾದಿಯಾಗಿದ್ದೇನೆ ನೋಡೋಣ ಮುಂದೇನಾಗಲಿದೆ ಎಂದರು ಧನ್ಯ ರಾಮ್ ಕುಮಾರ್.
ಕಥೆ, ಕವನ ಬರೀತಿನಿ ಹಾಡು ಹಾಡುವುದನ್ನು ಕಲಿಯುತ್ತಿದ್ದೇನೆ,ನಿರ್ದೇಶನ ಮಾಡುವ ಆಸೆ ಇದೆ ಅದಕ್ಕಾಗಿ ಸಾಕಷ್ಟು ಕಲಿಯಬೇಕಾಗಿದೆ ಎಂದರು.