
ಹಿರಿಯ ನಟಿ ಮಾಲಾಶ್ರೀ ಹಾಗೂ ನಟಿ ಹರ್ಷಿಕಾ ಪೂಣಚ್ಛ ಅಭಿನಯದ “ ಮಾರಕಾಸ್ತ್ರ” ಚಿತ್ರದ ಚಿತ್ರದ “ಗ್ಲಾಮರು ಗಾಡಿ” ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಮಂಜು ಕವಿ ಸಾಹಿತ್ಯ ಸಂಗೀತವಿರುವ “ಗ್ಲಾಮರು ಗಾಡಿ” ಹಾಡಿಗೆ ಅನನ್ಯ ಭಟ್ ಧ್ವನಿಯಾಗಿದ್ದಾರೆ. ಹೀನಾ ಎಂ ಪಂಚಾಲ್ ಹೆಜ್ಜೆ ಹಾಕಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಗುರುಮೂರ್ತಿ ಸುನಾಮಿ “ಮಾರಕಾಸ್ತ್ರ” ಕೌಟುಂಬಿಕ ಚಿತ್ರ.ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲವೂ ಇದೆ. ಈಗಾಗಲೇ ಟೀಸರ್ ಎಲ್ಲರ ಮನ ಗೆದ್ದಿದೆ. ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು.
ಚಿತ್ರಕ್ಕೆ ಕ್ರಿಯೇಟೀವ್ ಹೆಡ್ ಆಗಿ ಕಾರ್ಯನಿರ್ವಹಿಸಿರುವ ನೃತ್ಯ ನಿರ್ದೇಶಕ ಧನ ಕುಮಾರ್, ನಿರ್ಮಾಪಕರು ಈಗಾಗಲೇ ಅರ್ಧದಷ್ಟು ಸೇಫ್ ಆಗಿದ್ದಾರೆ. ಹಿಂದಿ ರೈಟ್ಸ್ ಬಾರಿ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ನಟರಾಜ್ ಮಾತನಾಡಿ , ಪತ್ನಿ ಕೋಮಲಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಮಾಡುತ್ತೇನೆ ಎಂದಾಗ, ಬೇಡ ಅಂದವರೆ ಹೆಚ್ಚು. ಆಕ್ಷನ್ ಕ್ವೀನ್ ಮಾಲಾಶ್ರೀ ಸೇರಿದಂತೆ ಬಹು ದೊಡ್ಡ ತಾರಾಬಳಗ ಹೊಂದಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರದ ನಾಲ್ಕು ಹಾಡುಗಳನ್ನು ಹಾಡಿದ್ದೇನೆ ಹಾಗೂ ನಟಿಸಿದ್ದೇನೆ ಎಂದರು.
ಚಿತ್ರದ ಛಾಯಾಗ್ರಹಕ ಅರುಣ್ ಸುರೇಶ್, ಸಂಕಲನಕಾರ ವಿಶ್ವ ಹಾಗೂ ಚಿತ್ರದಲ್ಲಿ ನಟಿಸಿರುವ ಆನಂದ್ ಆರ್ಯನ್, ರವಿಚೇತನ್, ಮೈಕೊ ನಾಗರಾಜ್, ಮನಮೋಹನ್ ರೈ, ಭರತ್ ಮುಂತಾದವರು “ಮಾರಕಾಸ್ತ್ರ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.