ಗ್ರೇಡ್-2 ತಹಶೀಲ್ದಾರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ನ.7-ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಹಿಂದೇಟು ಹಾಕುತ್ತಿರುವ ಗ್ರೇಡ್-2 ತಹಶೀಲ್ದಾರ ವೆಂಕನಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ತಳವಾರ ಎಸ್.ಟಿ.ಹೋರಾಟ ಸಮಿತಿ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಸಮಿತಿ ರಾಜ್ಯಾಧ್ಯಕ್ಷ ಡಾ.ಸರ್ದಾರ ರಾಯಪ್ಪ, ರಾಜ್ಯ ಕಾರ್ಯದರ್ಶಿ ರಾಜೇಂದ್ರ ರಾಜವಾಳ, ಜಿಲ್ಲಾಧ್ಯಕ್ಷ ಗಿರೀಶ ತುಂಬಗಿ, ಮುಖಂಡರಾದ ಪ್ರೇಮ್ ಕೆ., ಭಾಪುಗೌಡ ಮಾಲಿಪಾಟೀಲ, ದಿಗಂಭರ ಡಾಂಗೆ, ಈರಣ್ಣ ಹೊಸಮನಿ, ಮರೆಪ್ಪ ತಳವಾರ, ಸಿದ್ದು ಬೂಸಾ, ಸಾಬಣ್ಣ ತಳವಾರ, ವಿಜಯಕುಮಾರ ಹಾವನೂರ, ಮಹಾದೇವಪ್ಪ ತಳವಾರ, ಸಾಯಬಣ್ಣ ತಳವಾರ, ಮಲ್ಲಿಕಾರ್ಜುನ ಹೇರೂರ, ಬಸವರಾಜ ನಾಯಕೋಡಿ, ದತ್ತು, ಮಡಿವಾಳಪ್ಪ ತಳವಾರ, ಲಕ್ಷ್ಮೀಪುತ್ರ ಹೇರೂರ, ಯಲ್ಲಪ್ಪ ತಳವಾರ, ಸಿದ್ದು ತಳವಾರ, ಸುರೇಶ, ಸಿದ್ದಣ್ಣ ತಳವಾರ, ಶ್ರೀಮಂತ ತಳವಾರ, ಆಕಾಶ ತಳವಾರ, ಶಾಂತಕುಮಾರ ತಳವಾರ, ಮಹಾಂತ ತಳವಾರ, ಬಸವರಾಜ ತಳವಾರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಶನ್‍ನಂತೆ ಹಾಗೂ ರಾಜ್ಯ ಸರ್ಕಾರದ ಸುತ್ತೋಲೆ ಪ್ರಕಾರ ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಬೇಕು, ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ಜೊತೆಗೆ ಹೈಕೋರ್ಟ ಆದೇಶವಿದ್ದರೂ ಗ್ರೇಡ್-2 ತಹಶೀಲ್ದಾರ ವೆಂಕನಗೌಡ ಅವರು ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಹೀಗಾಗಿ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದೇ ವೇಳೆ ಪ್ರತಿಭಟನಾಕಾರರು ವೆಂಕನಗೌಡ ಹಠಾವೋ, ತಳವಾರ ಸಮಾಜ ಬಚಾವೋ ಘೋಷಣೆ ಕೂಗಿದರು.