ಗ್ರೀನ್ ಹೊಸಪೇಟೆ ಯುವಕರ ಸಂಕಲ್ಪ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ3:  ಸ್ಥಳೀಯ ಗ್ರೀನ್ ಹೊಸಪೇಟೆ ಸಂಸ್ಥೆಯ ಪದಾಧಿಕಾರಿಗಳು ಹಸಿರೀಕರಣ ಕಾರ್ಯಕ್ರಮದ ಭಾಗವಾಗಿ ನಗರದ ಪೋಲಿಸ್ ಠಾಣೆಗಳಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಪ್ರೇಮ ಪ್ರದರ್ಶಿಸಿದರು.
ನಗರಠಾಣೆ ಹಾಗೂ ಗ್ರಾಮೀಣ ಠಾಣೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,
ಸಂಸ್ಥೆಯ ಅಧ್ಯಕ್ಷ ಕೆ.ಸುನೀಲ್‍ಗೌಡ ಮಾತನಾಡಿ, ಹೊಸಪೇಟೆ ನಗರವನ್ನು ಹಸಿರೀಕರಣ ಮಾಡುವ ಉದ್ದೇಶವನ್ನು ಹೊಂದಿರುವ ಗ್ರೀನ್ ಹೊಸಪೇಟೆ ಸಂಸ್ಥೆ, ಮೊದಲು ನಗರದ ಎಲ್ಲಾ ಸರ್ಕಾರಿ ಕಚೇಗಳನ್ನು ಹಸಿರೀಕರಣ ಮಾಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಪ್ರಥಮವಾಗಿ ಪೊಲೀಸ್ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಠಾಣೆಗಳಲ್ಲಿ ಹಸಿರೀಕರಣ ಮಾಡುತ್ತಿದ್ದೇವೆ ಎಂದರು.
ಗ್ರಾಮೀಣ ಪೋಲಿಸ್ ಠಾಣೆಯ ಪಿಐ ಶ್ರೀನಿವಾಸ್ ಮೇಟಿ, ನಗರದ ಪೋಲಿಸ್ ಠಾಣೆ ಪಿಐ ಎಂ.ಶ್ರೀನಿವಾಸ್ ಮಾತನಾಡಿ ಯುವಕರಲ್ಲಿ ಪರಿಸರ ಪ್ರೇಮ ವೃದ್ಧಿಯಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.  
ರವಿಜೈನ್, ಶಾಂತೇಶ್ ಕುಮಾರ್, ಪ್ರಕಾಶ್ ಶರ್ಮ, ರಾಘವೇಂದ್ರ, ಗಣೇಶ್, ರೆಬೆಕಾ, ವಿನಯಕುಮಾರ್, ಅಭಿಶೇಕ್, ಸತ್ಯ, ಸಿದ್ದು, ಶಿವುಕುಮಾರ್ ಹಾಗೂ ಪ್ರಜ್ವಲ್ ಇತರರು ಹಾಜರಿದ್ದರು.