ಗ್ರೀನ್ ರಾಯಚೂರು: ನಟ ಅಪ್ಪುಗೆ ಸಸಿ ನೆಡುವ ಮೂಲಕ ಶ್ರದ್ಧಾಂಜಲಿ

ರಾಯಚೂರು.ನ.೦೭.ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್ ರಾಜಕುಮಾರ್ ಅವರ ಸ್ಮರಣೀಯವಾಗಿ ಎಲ್ಲರೂ ಸಸಿ ನೆಡಬೇಕು ಹಾಗೂ ನೇತ್ರದಾನ ಮಾಡಬೇಕು ಎಂದು ಗ್ರೀನ್ ರಾಯಚೂರು ಗೌರವಾಧ್ಯಕ್ಷ ಕೊಂಡ ಕೃಷ್ಣಮೂರ್ತಿ ಅವರು ಹೇಳಿದರು.
ನಗರದ ಮಾವಿನ ಕೆರೆ ಉದ್ಯಾನವನದಲ್ಲಿ ಗ್ರೀನ್ ರಾಯಚೂರು,ಪುನೀತ್ ರಾಜಕುಮಾರ ಅಭಿಮಾನಿಗಳ ಬಳಗ ಹಾಗೂ ನವೋದಯ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ನಟ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಸಿ ನೆಟ್ಟು ಮಾತನಾಡಿದ ಅವರು ಅಪ್ಪು ಅವರ ಅಗಲಿಕೆಯಿಂದ ಎಲ್ಲರಿಗೆ ನೋವು ಉಂಟು ಮಾಡಿದ್ದು ಅವರು ಸಾಧನೆ ಅಪಾರವಾಗಿದೆ ಇಂತಹ ವ್ಯಕ್ತಿ ಮತ್ತೆ ಹುಟ್ಟಿ ಬರುವುದಿಲ್ಲ ಅದರಿಂದ ಅವರ ನೆನಪಿಗಾಗಿ ಎಲ್ಲರೂ ಮನೆಗೊಂದು ಸಸಿ ನೆಟ್ಟು ನೇತ್ರದಾನ ಮಾಡಿ ಎಂದು ಹೇಳಿದರು.
ನಂತರ ಕಾರ್ಯದರ್ಶಿ ರಾಜೇಂದ್ರ ಶಿವಾಳೆ ಅವರು ಮಾತನಾಡುತ್ತ ಗ್ರೀನ್ ರಾಯಚೂರು ೨೭೩ ನೇ ಶ್ರಾಮದಾನ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು ಇಂದು ಸುಮಾರು ೪೬ ಸಸಿಗಳನ್ನು ನೆಡಲಾಗುವುದು ಹಾಗೂ ಸಾಕಷ್ಟು ಜನರು ನೇತ್ರದಾನವನ್ನು ಮಾಡಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರಸ್ವತಿ ಕಿಲಕಿಲೇ,ಡಾ.ಸಂಧ್ಯಾ ನವೋದಯ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.