ಗ್ರಾ.ಪಂ. 2ನೇ ಹಂತದ ಚುನಾವಣೆ:ಶಾಂತಿಯುತ ಶೇ.81 ರಷ್ಟು ಮತದಾನ

?????????????????????????????????????????????????????????????????????????????????????????????????????????????????????????????????????????????

ಸಿಂದಗಿ:ಡಿ.28: ಸಿಂದಗಿ- ಆಲಮೇಲ ತಾಲ್ಲೂಕಿನ ಒಟ್ಟು 29 ಗ್ರಾಮ ಪಂಚಾಯ್ತಿಗಳ ಪೈಕಿ 23 ಗ್ರಾಮ ಪಂಚಾಯ್ತಿಗಳ 380 ಸ್ಥಾನಗಳಿಗೆ 1069 ಅಭ್ಯರ್ಥಿಗಳ ಆಯ್ಕೆಗೆ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ಗೋವಾ ಸೇರಿದಂತೆ ಹೊರರಾಜ್ಯಗಳಿಗೆ ಒಲಸೆ ಹೋದ ಮತದಾರರು ಕೂಡಾ ತಮ್ಮ ತಮ್ಮ ಗ್ರಾಮಗಳಿಗೆ ದೌಡಾಯಿಸಿ ತಮ್ಮ ಪ್ರಜಾಪ್ರಭುತ್ವದ ಸಂವಿಧಾನ ಬದ್ದವಾದ ಮತವನ್ನು ಅತ್ಯಂತ ಉತ್ಸಾಹದಿಂದ ಶಾಂತಿಯುತವಾಗಿ ಚಲಾವಣೆ ಮಾಡಿದರು.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಸಂಜೆ 5 ಗಂಟೆಯ ವರೆಗೆ ಅತ್ಯಂತ ಶಾಂತಿಯುತವಾಗಿ ಶೇ.81 ರಷ್ಟು ಮತದಾನ ನಡೆಯಿತು. ತಾಲೂಕಿನ ಪ್ರತಿ ಮತಗಟ್ಟೆಗಳಲ್ಲಿ ಕೊರೋನಾ ಹಿನ್ನಲೆಯಲ್ಲಿ ಮತದಾರರಿಗೆ ಮಾಸ್ಕ್, ಸ್ಯಾನಿಟೈಸರ್, ಸ್ಕ್ರೀನಿಂಗ್ ಮಾಡುವ ವ್ಯವಸ್ಥೆ ಆಯೋಜಿಸಲಾಗಿತ್ತು ಮತಗಟ್ಟೆಯ ಗೇಟ್‍ನಲ್ಲಿಯೆ ಮತದಾರರ ಆರೋಗ್ಯ ಪರೀಶಿಲಿಸಿ ಅವರನ್ನು ಒಳ ಬಿಡಲಾಯಿತು. ತಾಲೂಕಿನಲ್ಲಿ ಕೇಲವು ಸಣ್ಣ ಪುಟ್ಟ ಘಟನೆಗಳು ನಡೆದದ್ದು ಬಿಟ್ಟರೆ ಬೇರಾವ ಪ್ರಭಲ ಸಮಸ್ಯೆ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.
ಮತದಾನ ಆರಂಭದಲ್ಲಿಯೆ ಮತಗಟ್ಟೆಗೆ ದಾವಿಸಿದ ಮತದಾರರು ಸಾಲು ಸಾಲಾಗಿ ನಿಂತು ಬಿಸಿಲಾಗುವ ಮುನ್ನವೇ ಬೆಳಿಗ್ಗೆಯೆ ಬಹುಬೇಗ ಮತ ಚಲಾಯಿಸಿ ತಮ್ಮ ನಿತ್ಯದ ಕಾರ್ಯಗಳಲ್ಲಿ ಭಾಗಿಯಾಗಿರುವುದು ವಿಶೇಷವಾಗಿತ್ತು. ಅದರಲ್ಲಿ ಮಹಿಳೆಯರ ಸಂಖ್ಯೆಯೆ ಹೆಚ್ಚಾಗಿರುವುದು ಕಂಡಿತು. ಆದರೆ ಇನ್ನೂ ಕೇಲವರು ತಮ್ಮ ಹೋಲ-ಗದ್ದೆಗೆಳ ಕಾರ್ಯ ಮೂಗಿಸಿ ಮಧ್ಯಾಹ್ನದ ಸಮಯದಲ್ಲಿ ಮತ ಚಲಾಯಿಸಿದರು.