
ಸಂಜೆವಾಣಿ ವಾರ್ತೆ
ಸಂಡೂರು: ಅ: 6: ತಾಲೂಕಿನ ಚೋರನೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅನುಚೂಚಿತ ಜಾತಿ ಮೀಸಲಾತಿಯ ಅಧ್ಯಕ್ಷ ಸ್ಥಾನಕ್ಕೆ ನನ್ನು ಆಯ್ಕೆಮಾಡಿದ್ದು ಜನತೆ ನನ್ನ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಅಭಿವೃದ್ದಿಗೆ ನಾಂದಿ ಹಾಡುತ್ತೇನೆ ಎಂದು ಆಯ್ಕೆಯಾದ ಮಂಗಳ ಮುಖಿಯಾದ ಸಿ.ಅಂಜಿನಮ್ಮ ತಂದೆ ತಿಪ್ಪೇಸ್ವಾಮಿ ತಿಳಿಸಿದರು.
ಅವರು ಮಾತನಾಡಿ ಇಲ್ಲಿಯ ಜನ ನನ್ನ ವಿರುದ್ಧ ಸ್ಪರ್ಧಿಸದೇ ಅಧ್ಯಕ್ಷಳನ್ನಾಗಿ ಅವಿರೋಧವಾಗಿ ಆಯ್ಕೆಮಾಡಿದ್ದಾರೆ. ಆನತೆಗೆ ಉತ್ತಮ ಸಏವೆ ಸಲ್ಲಿಸಲು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಅಪಾರವಾಗಿ ಶ್ರಮಿಸುವೆ , ನನ್ನ ಮೇಲೆ ವಿಶ್ವಾಸ ಭವರವಸೆಯೊಂದಿಗೆ ನನ್ನನ್ನು ಗೆಲ್ಲಿಸಿದ್ದಾರೆ, ಜನತೆಗೆ ಅಗತ್ಯ ಮೂಲ ಸೌಕರ್ಯಕ್ಕಾಗಿ ಅಪಾರವಾಗಿ ಶ್ರಮಿಸುವೆ ಎಂದು ಚೋರನುರು ಗ್ರಾಮಪಂಚಾಯಿತಿಗೆ 2ನೇ ಅವಧಿಗೆ ಆಯ್ಕೆ ಮಾಡಿದ್ದು ನನಗೆ ಹೆಮ್ಮೆ ಎನಿಸಿದೆ ಎಂದು ತಮ್ಮ ಮನದಾಳದ ಮಾತುಗಳನ್ನಾಡಿದರು.
ಪಂಚಾಯಿತಿ ಸದಸ್ಯರ , ಅಧಿಕಾರಿಗಳ ಸಹಕಾರ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ, ನನನೊಬ್ಬಳಿಂದ ಏನು ಮಾಡಲು ಸಾಧ್ಯವಿಲ್ಲ ನಾನು ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಮಂಗಳ ಮುಖಿಯರ ಸಭೆಯಲ್ಲಿ ಭಾಗವಹಿಸಿದ್ದೇನೆ, ನನ್ನ ಸಮುದಾಯಕ್ಕೆ ನಾನು ಕೈಲಾದ ಸಹಾಯ ಮಾಡುತ್ತೇನೆ.
ನನ್ನ ಮೊದಲ ಹೆಸರು; ಅಂಜಿನಪ್ಪ: ಸಿ.ತಿಪ್ಪೇಸ್ವಾಮಿ , ತಿಪ್ಪಮ್ಮನವರ ಮಗಳಾದ ಇವರಿಗೆ ಮೂವರು ಸಹೋದರರು ಇಬ್ಬರೂ ಸಹೋದರಿಯರು ಇದ್ದಾರೆ, ಮೂಲತ: ಸಂಡೂರು ತಾಲೂಕಿನ ಚೋರನೂರು ಗ್ರಾಮದವರಾದ ಇವರು ಮೂಲಕ ಹೆಸರು ಸಿ. ಅಂಜಿನಪ್ಪ ಇವರು ಮಂಗಳ ಮುಖಿಯಾದ ನಂತರ ಅಂಜಿನಮ್ಮ ಎನ್ನುವ ಹೆಸರಿನಿಂದ ಬದಲಾಗಿರುವುದುನ್ನು ಸ್ಮರಿಸಬಹುದು.