ಗ್ರಾ.ಪಂ.ಸಿಬ್ಬಂದಿಗಳಿಗೆ ಉಚಿತ ಆಹಾರ ವಿತರಣೆ

ಮುದ್ದೇಬಿಹಾಳ :ಮೇ.21:ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೇ,ಗ್ರಾಪಂ ಕಾರ್ಯಾಲಯದ ಸಿಬ್ಬಂದಿಗಳಿಗೆ ಉಚಿತ ಆಹಾರ ವಿತರಣೆ , ಶುದ್ಧ ಕುಡಿಯುವ ನೀರು,ಸಾನಿಟೈಜರ್, ಮಾಸ್ಕ್, ವಿತರಣೆ ಯನ್ನು ಮಾಜಿ ಗ್ರಾ.ಪಂ.ಅದ್ಯಕ್ಷ ಚಿದುಗೌಡ ತುಂಬಗಿಯವರ ಮೂಲಕ ವಿತರಿಸಲಾಯಿತು

ಈ ಸಂದರ್ಭದಲ್ಲಿ ಪ್ರಭು ತಳಗೇರಿ ಮಾತನಾಡಿ

ವೈದ್ಯರ ಕರ್ತವ್ಯನಿಷ್ಠೆ, ಪರಿಶ್ರಮ ಮತ್ತು ಸೇವೆಗಳನ್ನು ಸಮಾಜ ಸದಾ ಆದರಿಸುತ್ತದೆ. ಈ ಕೋವಿಡ್ 19 ವಿರುದ್ಧ ದಣಿವರಿಯದೆ ಹೋರಾಡುತ್ತಿರುವ ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಧನ್ಯವಾದಗಳು

ಕೋವಿಡ್-19ನ್ನು ಎದುರಿಸಿ ಜನತೆಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ವೈದ್ಯರು ಯಶಸ್ಸು ಸಾಧಿಸುತ್ತಾರೆನ್ನುವ ವಿಶ್ವಾಸ ನಮಗಿದೆ, ಅನಾರೋಗ್ಯ ಉಂಟಾದಾಗ ಚಿಕಿತ್ಸೆ ನೀಡುವ ವೈದ್ಯರನ್ನು ದೇವರಂತೆ ಕಾಣುಬೇಕು ಹಗಲಿರುಳು ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗಳ ಕರ್ತವ್ಯ ತುಂಬಾ ದೊಡ್ಡದು.ಇಂತಹ ಸನ್ನಿವೇಶದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಪ್ರಭುಗೌಡ ದೇಸಾಯಿ ಅಭಿಮಾನಿ ಬಳಗದಿಂದ ಆರ್ ಎಸ್ ಪಾಟೀಲ್ ಸೇವಾ ಸಮಿತಿ ವತಿಯಿಂದ ಉಚಿತ ಆಹಾರ ವಿತರಣೆ ಮಾಡಲಾಗುತ್ತಿದೆ.

ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ನಿರ್ದೇಶಕರುಗಳಾದ ರಾಜುಗೌಡ ಪಾಟೀಲ್, ಮೌನೇಶ್ ಬಡಿಗೇರ್, ಗ್ರಾಮದ ಮುಖಂಡರುಗಳಾದ ರಾಮನಗೌಡ ಹುಬ್ಬಳ್ಳಿ, ಸಾಹೇಬಗೌಡ ತುಂಬಗಿ, ಗುರಣ್ಣಗೌಡ ತುಂಬಗಿ, ಮಾಜಿ ಗ್ರಾ.ಪಂ.ಅದ್ಯಕ್ಷರಾದ ಸಿದ್ದಪ್ಪ ತಳಗೇರಿ, ಬಿಜೆಪಿ ಎಸ್,ಸಿ.ಮೋರ್ಚ ಉಪಾಧ್ಯಕ್ಷರಾದ ಶಾಂತಪ್ಪ ಕಣಕಾಲ್ ರವರು ಭಾಗವಹಿಸಿದ್ದರು..