ಗ್ರಾ.ಪಂ ಸದಸ್ಯ ಸಾವು: ಡಾ. ಬೆಲ್ದಾಳೆ ಸಾಂತ್ವನ

ಬೀದರ್:ಜ.17: ಬೀದರ್ ಉತ್ಸವ ವೇಳೆ ಹೃದಯಾಘಾತದಿಂದ ಮೃತಪಟ್ಟ ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ರಾಚಯ್ಯ ಸ್ವಾಮಿ ಅವರ ಮನೆಗೆ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿದರು.
ಮೃತರ ಪತ್ನಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ವೈಯಕ್ತಿಕ ಧನ ಸಹಾಯ ಮಾಡಿದರು. ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ, ಶೀಘ್ರ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಹಾಬಾದ್, ಪ್ರಧಾನ ಕಾರ್ಯದರ್ಶಿ ಚೆನ್ನಪ್ಪ ಗೌರಶೆಟ್ಟಿ, ಮುಖಂಡರಾದ ಚಂದ್ರಕಾಂತ ಯಾಕತಪುರ, ಸಂಜುಕುಮಾರ ಕೋಳಿ, ಬಸವರಾಜ ಅಮ್ಮಣ್ಣ, ಶರಣಯ್ಯ ಸ್ವಾಮಿ, ಚಂದ್ರಶೇಖರ ಪಾಟೀಲ, ವಿಠ್ಠಲರಾವ್ ಪಾಟೀಲ, ನರಸಪ್ಪ ಜೆ, ಸಂಜುಕುಮಾರ, ಪ್ರಶಾಂತ, ಶಿವಲಿಂಗ, ರಾಜು, ರಾಜ ರೆಡ್ಡಿ, ಧನರಾಜ ಪೆÇೀಶೆಟ್ಟಿ, ಪ್ರಭು ರೆಡ್ಡಿ ಇದ್ದರು.