ಗ್ರಾ.ಪಂ ಸದಸ್ಯ ನಲ್ಲೂರು ಶ್ರೀನಾಥ್‍ರಿಂದ ಬಿಜೆಪಿ ಮುಖಂಡರಿಗೆ ಸನ್ಮಾನ

ಚಾಮರಾಜನಗರ, ಜ.02- ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಲ್ಲೂರು 2 ನೇ ಬ್ಲಾಕ್ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ನಲ್ಲೂರು ಶ್ರೀನಾಥ್ ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಮುಖಂಡರುಗಳನ್ನು ಭೇಟಿ ಮಾಡಿ ಅಭಿನಂದಿಸಿದರು.
ಕೇಂದ್ರ ಬರ ಪರಿಹಾರ ರಾಜ್ಯ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಚಾಮರಾಜನಗರದ ತಾಲ್ಲೂಕು ಮಂಡಲ ಅಧ್ಯಕ್ಷ ಪ್ರಶಾಂತ್ ಅವರನ್ನು ನಲ್ಲೂರು ಶ್ರೀನಾಥ್ ಅಭಿನಂದಿಸಿ ಸನ್ಮಾನಿಸಿದರು.
ನಲ್ಲೂರು ಶ್ರೀನಾಥ್ ಅವರು ತಾ.ಪಂ ಮಾಜಿ ಸದಸ್ಯ ನಲ್ಲೂರು ಸೋಮಶೇಖರ್ ಅವರ ವಿರುದ್ದ ಜಯಗಳಿಸಿರುವುದು ವಿಶೇಷ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಾಥ್ ಅವರು ಕ್ಷೇತ್ರದ ಜನರ ಆಶೀರ್ವಾದದಿಂದ ಇಂದು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಜನರ ಸೇವೆಯೇ ನನ್ನ ಗುರಿಯಾಗಿದ್ದು, ಎಲ್ಲರ ವಿಶ್ವಾಸ ಪಡೆದು ಗ್ರಾಮ ಪಂಚಾಯತಿ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದರು. ಆ ನಿಟ್ಟಿನಲ್ಲಿ ಪಕ್ಷದ ಮಾರ್ಗದರ್ಶಕರನ್ನು ಇಂದು ಅಭಿನಂದಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ರಾಮಸಮುದ್ರ ವೇಣುಗೋಪಾಲ್, ಸೋಮು, ಕಾಗಲವಾಡಿ ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.