ಗ್ರಾ.ಪಂ ಸದಸ್ಯ ನಂಜುಂಡಗೌಡರಿಗೆ ಸನ್ಮಾನ

ಕೋಲಾರ,ಜ.೧೧: ಸಹಕಾರ ತತ್ವದಡಿ ನಂಬಿಕೆಯಿಟ್ಟು ಕೆಲಸ ಮಾಡೋಣ ಸಂಘದಲ್ಲಿ ಭ್ರಷ್ಟತೆ ಇಣುಕಿ ನೋಡದಂತೆ ಎಚ್ಚರವಹಿಸುವ ಮೂಲಕ ಸದೃಢಗೊಳಿಸೋಣ ಎಂದು ಗೋಲ್ಡ್‌ಪೀಲ್ಡ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ತಿಳಿಸಿದರು.
ಸೊಸೈಟಿಯಲ್ಲಿ ನಡೆದ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಸಂಘದ ನಿರ್ದೇಶಕರೂ ಆಗಿದ್ದು, ಇದೀಗ ಅರಾಭಿಕೊತ್ತನೂರು ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿರುವ ಎ.ಎಸ್.ನಂಜುಂಡಗೌಡರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.ನಮ್ಮ ಸಹಕಾರ ಸಂಘ ಇನ್ನೂ ಬೆಳೆಯುತ್ತಿರುವ ಕೂಸು, ಅದನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಂಕಲ್ಪದೊಂದಿಗೆ ಎಲ್ಲರೂ ಕೆಲಸ ಮಾಡುತ್ತಿದ್ದೇವೆ, ಇಲ್ಲಿ ಒಂದು ನಯಾಪೈಸೆ ಭ್ರಷ್ಟತೆಗೆ ಅವಕಾಶವಿಲ್ಲದಂತೆ ನಡೆದುಕೊಂಡಿದ್ದೇವೆ ಎಂದರು.
ಸಂಘದಲ್ಲಿ ಎಲ್ಲಾ ವಿದ್ಯಾವಂತರು, ನಿವೃತ್ತು ಪ್ರಾಧ್ಯಾಪಕರು, ಪ್ರಾಂಶುಪಾಲರೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಕರಾಗಿದ್ದು, ಸಂಘದಲ್ಲಿ ಯಾವುದೇ ದುರ್ವವ್ಯವಾರಗಳಿಗೆ ಅವಕಾಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶ್ರೀರಾಮ್,ಕಾನೂನು ಸಲಹೆಗಾರರಾದ ಟಿ.ಜಿ.ಮನ್ಮಥರೆಡ್ಡಿ, ನಿರ್ದೇಶಕರಾದ ಸುವರ್ಣರೆಡ್ಡಿ, ಮುನಿರಾಜು, ವೆಂಕಟರಾಜು, ಕೆ.ವಿ.ಮುನಿವೆಂಕಟಪ್ಪ, ನಂಜುಂಡಗೌಡ, ರೂಪ್‌ಕುಮಾರ್, ಬಿ.ಜಿ.ಶ್ರೀದೇವಿ ಲಕ್ಷ್ಮೀದೇವಿ, ರಾಮಾನಾಯಕ್ ಮತ್ತಿತರರು ಉಪಸ್ಥಿತರಿದ್ದರು.