ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 29 :- ಒಂದು ಕಡೆ ಗ್ರಾಮಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಹುಡುಕಿಕೊಂಡು ಬಂದರೆ ಇನ್ನೊಂದು ಕಡೆ ಅಧ್ಯಕ್ಷ ಸ್ಥಾನ ಗದ್ದುಗೆಗೇರುವ ಮೊದಲೇ ಸೂಲದಹಳ್ಳಿ ಗ್ರಾಮಪಂಚಾಯಿತಿಯ 4ನೇ ವಾರ್ಡಿನ ಸದಸ್ಯೆ ಲಕ್ಷ್ಮೀದೇವಿ ದುರಾದೃಷ್ಟದ ಯಮಪಾಶಕ್ಕೆ ಬಲಿಯಾದ ಘಟನೆ ಜರುಗಿದೆ.
ತಾಲೂಕಿನ ಸೂಲದಹಳ್ಳಿ ಗ್ರಾಮದ 4ನೇ ವಾರ್ಡಿನ ಗ್ರಾಮಪಂಚಾಯಿತಿ ಸದಸ್ಯೆಯಾಗಿದ್ದ ಬೋವಿ ಲಕ್ಷ್ಮೀದೇವಿ ಈರಣ್ಣ ಅವರು ಮೊದಲ ಹಂತದಲ್ಲಿಯೂ ಅದೃಷ್ಟ ಹುಡುಕಿಕೊಂಡು ಬಂದಿದ್ದು ಅನುಸೂಚಿತ ಜಾತಿ ಮಹಿಳೆ ಉಪಾಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದಿದ್ದು ಅದನ್ನು ಮೊದಲ ಹಂತದಲ್ಲಿ ಸ್ಥಾನ ಅಲಂಕರಿಸಿದ ಅದೃಷ್ಟ ಲಕ್ಷ್ಮಿಗೆ ಎರಡನೇ ಹಂತದ ಮೀಸಲಾತಿಯಲ್ಲಿ ಅನುಸೂಚಿತ ಜಾತಿ ಮಹಿಳೆ ಅಧ್ಯಕ್ಷ ಸ್ಥಾನ ಎಂದು ಘೋಷಣೆಯಾಗಿದ್ದರಿಂದ ಮತ್ತೊಮ್ಮೆ ಅದೃಷ್ಟದ ಬಾಗಿಲು ತೆಗೆದುಬಿಟ್ಟಿತು ಎನ್ನುವುದಕ್ಕೆ ಅನುಸೂಚಿತ ಜಾತಿ ಮಹಿಳೆ ಮೀಸಲಾತಿಯಲ್ಲಿ ಇಡೀ ಪಂಚಾಯತಿಯಲ್ಲಿ ಈ ಮಹಿಳೆ ಬಿಟ್ಟರೆ ಮತ್ತೊಬ್ಬರು ಇರದೇ ಇರುವುದು ಆದರೆ ಲಕ್ಷಾನುಗಟ್ಟಲೆ ಖರ್ಚು ಮಾಡಿದರು ಸಿಗದ ಅದೃಷ್ಟ ಲಕ್ಷ್ಮಿಗೆ ಸಿಕ್ಕಿತ್ತಾದರೂ ಆದರೆ ಸಾವೆಂಬ ಶನಿ ಮಾತ್ರ ಬೆನ್ನತ್ತಿದ್ದರಿಂದ ಮೊದಲ ಉಪಾಧ್ಯಕ್ಷ ಸ್ಥಾನ ಅದೃಷ್ಟ ಪಡೆದುಕೊಂಡಿದ್ದ ಲಕ್ಷ್ಮೀದೇವಿ ಎರಡನೇ ಹಂತದ ಅಧ್ಯಕ್ಷ ಸ್ಥಾನ ಅಲಂಕರಿಸುವ ಮೊದಲೇ ಯಮರಾಜನ ಕೂಗಿಗೆ ಸಾವಿಗೆ ಶರಣಾಗಿದ್ದಾರೆ.
ಈ ಸಾವಿಗೆ ಮನೆಯಲ್ಲಿನ ಸಣ್ಣಪುಟ್ಟ ಜಗಳವೆಂದು ಹೇಳಲಾಗುತ್ತಿದ್ದು ಗ್ರಾಮಪಂಚಾಯಿತಿ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮಂಗಳವಾರ ನಡೆಸಲು ನಿಗಧಿಯಾಗಿತ್ತು ಆದರೆ ಲಕ್ಷ್ಮಿದೇವಿ ಮನೆಯಲ್ಲಿನ ವೈಯಕ್ತಿಕ ಕಾರಣಗಳ ಘಟನೆಯಿಂದ ನೊಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಅವರನ್ನು ದಾವಣಗೆರೆ ಆಸ್ಪತ್ರೆಗೆ ಸೇರಿಸಲಾಗಿತ್ತು ಈ ಸಂದರ್ಭದಲ್ಲಿ ಎರಡನೇ ಹಂತದ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಸಲಾಗಿತ್ತಾದರೂ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯದೆ ಇದ್ದು ಚೇತರಿಸಿಕೊಂಡ ಬಂದ ನಂತರ ಅಧ್ಯಕ್ಷ ಸ್ಥಾನದ ಚುನಾವಣೆ ನಿಗಧಿ ಮಾಡಬೇಕು ಅಂದುಕೊಂಡರೆ ಲಕ್ಷ್ಮೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದರಿಂದ ಅಧ್ಯಕ್ಷ ಸ್ಥಾನ ಏರುವ ಜಾಗದಲ್ಲಿ 4ನೇ ವಾರ್ಡಿನ ಸದಸ್ಯತ್ವ ಸ್ಥಾನಕ್ಕೆ ಚುನಾವಣೆ ನಡೆಸುವಂತಾಗಿದೆ.