ಗ್ರಾ.ಪಂ.ಸದಸ್ಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿನಾಳೆ ಬೆಂಗಳೂರು ಚಲೋ

Bellary SanjevaniAttachments12:22 PM (11 minutes ago)
to me


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.07: ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವಧನ ಹೆಚ್ಚಳ ಮಾಡಬೇಕು. ಅಧ್ಯಕ್ಷರಿಗೆ ಚೆಕ್ ಪವರ್
ಕೊಡಬೇಕು  ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ “ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ” ದಿಂದ ನಾಳೆ ಜ.8ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು, ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಪ್ರತಿಭಟನೆ
ನಡೆಸಲಿದ್ದೇವೆಂದು ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಉಪಾಧ್ಯಕ್ಷೆ ಹಾಗೂ ತಾಲೂಕಿನ ಶ್ರೀಧರಗಡ್ಡೆ ಗ್ರಾ.ಪಂ.ಸದಸ್ಯೆ ಎಚ್.ಎಂ.ಹೇಮಾ ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. 
ಈ ಹಿಂದೆ ನಡೆದ ರಾಜ್ಯಮಟ್ಟದ ಹೋರಾಟದಿಂದ ಕೆಲವು ಬೇಡಿಕೆಗಳು ಈಡೇರಿವೆ. ಆದರೆ, ಈಗ ಅನೇಕ ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ಬೆಂಗಳೂರು ಚಲೋ ಹೋರಾಟಕ್ಕೆ ಕರೆ ನೀಡಲಾಗಿದೆ.  ಜಿಲ್ಲೆಯಿಂದ ಸುಮಾರು 1500ಕ್ಕೂ ಹೆಚ್ಚು ಗ್ರಾ.ಪಂ.ಸದಸ್ಯರು ಹಾಗೂ ರಾಜ್ಯದಿಂದ 15 ಸಾವಿರಕ್ಕೂ ಹೆಚ್ಚು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಈ ಪ್ರತಿಭಟನೆ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದೆಂದು  ಹೇಳಿದರು.
ಕೇರಳ ರಾಜ್ಯದ ಮಾದರಿಯಲ್ಲಿ ಪಂಚಾಯಿತಿ ಅಧ್ಯಕ್ಷರಿಗೆ 15 ಸಾವಿರ ರೂ., ಉಪಾಧ್ಯಕ್ಷರಿಗೆ 12 ಸಾವಿರ ರೂ. ಹಾಗೂ ಸದಸ್ಯರಿಗೆ 10 ಸಾವಿರ ರೂ. ಗಳ ಮಾಸಿಕ ಗೌರವಧನ ನೀಡಬೇಕು. ಸದಸ್ಯರಿಗೆ ಸಭಾ ಭತ್ಯೆ 500 ರೂ.ಗರ ಹೆಚ್ಚಿಸಿ ಆದೇಶ ಹೊರಡಿಸಬೇಕು. ಸದಸ್ಯರ ಅವಧಿ ಬಳಿಕ ಶಾಸಕರಿಗೆ ಸಿಗುವಂತೆ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸದಸ್ಯರಿಗೆ ಉಚಿತ ವಿಮೆ ನೀಡಬೇಕು. ಸ್ಥಳೀಯ ಗ್ರಾಮ ಆಡಳಿತದಲ್ಲಿ ಆರ್‌ಡಿಪಿಆರ್ ಅಧಿಕಾರಿಗಳ, ಜಿ.ಪಂ.ಸಿಇಒ, ತಾ.ಪಂ.ಇಒ, ಅವರ ಹಸ್ತಕ್ಷೇಪ ನಿಲ್ಲಿಸಬೇಕು. ಪಂಚಾಯಿತಿ ಸದಸ್ಯರ ಗೌರವಧನ ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಬೇಕು ಎಂಬುದು ಸೇರಿದಂತೆ 15 ಬೇಡಿಕೆ ನಮ್ಮದಾಗಿದೆಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಎ.ಶ್ರೀಧರ್ ಏಳುಬೆಂಚೆ, ಸಂಡೂರು ತಾಲೂಕು ಅಧ್ಯಕ್ಷ ರೆಡ್ಡಿ ಬಾಬು  ಇದ್ದರು