ಗ್ರಾ.ಪಂ. ಸದಸ್ಯರು ಬಿಜೆಪಿ ಸೇರ್ಪಡೆ

ಗಂಗಾವತಿ ಜ 12 : ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡಮಕಲ್ ಗ್ರಾಮದ ಕಾಂಗ್ರೆಸ್‌ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಸೋಮವಾರ ಬಿಜೆಪಿಗೆ ಸೇರ್ಪಡೆಯಾದರು.
ಬಸವನಗೌಡ ಪೊಲೀಸ್ ಪಾಟೀಲ ಮತ್ತು ನಾಗರಾಜ ಕರಡೋಣಿ ಅವರನ್ನು ಶಾಸಕ ಪರಣ್ಣ ಮುನವಳ್ಳಿ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಸವರಾಜ ಸಂಡೂರು, ಶರಣಪ್ಪ ಮರಳಿ, ನಿಂಗಪ್ಪ ಕಂದಕೂರು, ಶರಣಪ್ಪ ಭೋವಿ, ಹನಮಂತ ಕರಡೋಣ, ಡಿ.ಕೆ.ಆಗೋಲಿ, ಬಗರ ಹುಕಂ ಸಮಿತಿಯ ಸದಸ್ಯ ಸಿದ್ದಲಿಂಗಯ್ಯ ಗಡ್ಡಿಮಠ, ಶರಣೆಗೌಡ , ಬಸವರಾಜ ಸಂಡೂರು, ಶರಣಪ್ಪ ಮರಳಿ, ನಿಂಗಪ್ಪ ಕಂದಕೂರು ಇದ್ದರು.