ಗ್ರಾ.ಪಂ ಸದಸ್ಯರು, ಪಿಡಿಓಗಳು ಪ್ರಾಮಾಣಿಕವಾಗಿ ಶ್ರಮಿಸಿ: ಎಂಎಲ್‍ಸಿ ಸುನೀಲಗೌಡ ಪಾಟೀಲ

ವಿಜಯಪುರ, ಏ.6-ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಓಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು. ಆ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಸುನೀಲ್‍ಗೌಡ ಪಾಟೀಲ್ ಹೇಳಿದರು.
ನಗರದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ವಿಜಯಪುರ ತಾಲೂಕು ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನೆ ಸಭೆ, ಅಹವಾಲು ಸ್ವೀಕಾರ ಮತ್ತು ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅದರಂತೆ ನರೇಗಾ, ಜಲಜೀವನ್ ಮಿಷನ್, ವಸತಿ ಯೋಜನೆ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ಹಲವು ಯೋಜನೆಗಳಿದ್ದು, ಫಲಾನುಭವಿಗಳಿಗೆ ಯೋಜನೆಗಳ ಲಾಭ ತಲುಪಿಸಬೇಕು. ಪಿ ಡಿ ಓ ಹಾಗೂ ಸದಸ್ಯರು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕು. ರೂ 2 ಕೋಟಿ ಅನುದಾನದಲ್ಲಿ ವಿಜಯಪುರ ಬಾಗಲಕೋಟೆ ಜಿಲ್ಲೆಗಳಿಗೆ ದೊರೆಯಬಹುದಾದ ನೆರವು ನೀಡಲು ಸಿದ್ಧ ಹಾಗೂ ಎಲ್ಲರ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ ಎಂದು ಅವರು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ ಎಸ್ ರಾಠೋಡ್ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರದಿಂದ ಗ್ರಾಮ ಪಂಚಾಯಿತಿ ಹಂತದಲ್ಲಿ ವಿವಿಧ ಯೋಜನೆಗಳು ಅನುμÁ್ಠನಗೊಳ್ಳುವ ಸಂಪೂರ್ಣ ಚಿತ್ರಣವನ್ನು ವಿವರಿಸಿದರು. ತಾಲೂಕಿನ 17 ಗ್ರಾಮಪಂಚಾಯಿತಿಗಳ 267 ಸದಸ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಿಡಿಓ ಗಳಾದ ಪಿ.ಡಿ. ನಿಲೇಕಣಿ, ಜಯಶ್ರೀ ಪವಾರ್, ಜಾಫರ್ ಕಲಾದಗಿ, ಎಸ್. ಐ ಗದ್ದಗಿಮಠ, ರಾಜಶೇಖರ್ ಬಿರಾದಾರ, ರಾಜೇಶ್ ಗಾಯಕವಾಡ್, ಮಹಾಂತಮ್ಮ ಬಿರಾದಾರ್, ವಿ.ಸಿ ಮೇತ್ರಿ, ಎಂ.ವಿ. ಘಂಟಿ, ಎ. ಎಸ್. ಲೋಣಾರ ಮಠ, ಆಯೇμÁ ಸಾಲೋಟಗಿ, ಆರ್. ಎನ್. ಬಿರಾದಾರ್ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ರಜನಿಕಾಂತ್ ನಿಂಬಾಳಕರ ನಿರೂಪಿಸಿ, ವಂದಿಸಿದರು.