ಗ್ರಾ.ಪಂ. ಸದಸ್ಯರಾಗಿ ಆಯ್ಕೆ

ಚನ್ನಮ್ಮನ ಕಿತ್ತೂರ,ಮಾ4: ಸಮೀಪದ ಖಾನಾಪೂರ ತಾಲೂಕ ಗಂದಿಗವಾಡ ಗ್ರಾ.ಪಂ. ಸದಸ್ಯ ಅರ್ಜುನ ಗಾಳಿ ನಿಧನದ ನಂತರ ತೆರವಾದ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅರ್ಜುನ ಗಾಳಿ ಆಯ್ಕೆಯಾಗಿದ್ದು ದೇಸಾಯಿ .ಅ. ಗಾಳಿ 230 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ.
ಒಟ್ಟು ಮತಗಳು 914 ಅದರಲ್ಲಿ ಮತ ಚಲಾಯಿಸಿದವರು 741, ದೇಸಾಯಿ ಗಾಳಿ 455 ಮತಗಳನ್ನು ಪಡೆದಿದ್ದಾರೆ. ಅವರ ಎದುರಾಳಿ ವಿನೋದ ರಾಮಲಿಂಗ ಕೂರೇರ್ 222 ಮತ, ಮಾದೇವ ಕೂರೇರ್ 39 ಮತ ಪಡೆದಿದ್ದಾರೆ.
ಈಗಾಗಲೇ ದೇಸಾಯಿ .ಅ. ಗಾಳಿ ಗಂದಿಗವಾಡ ಕೃಷಿ ಪತ್ತಿನ ಸಂಘದ ನಿರ್ದೇಶಕ ಮತ್ತು ಬಸವೇಶ್ವರ ಬ್ಯಾಂಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ದಿ. ಅರ್ಜುನ ಗಾಳಿ ಜಿ.ಪಂ. ಮತ್ತು ಗ್ರಾ.ಪಂ. ಸದಸ್ಯರಾಗಿ ಹಲವು ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ದೇಸಾಯಿ ಅರ್ಜುನ ಗಾಳಿಯವರನ್ನು ಉಪಾಧ್ಯಕ್ಷ ವiಹಾವೀರ ಹುಲಿಕವಿ ಗ್ರಾಮಸ್ಥರು ಸತ್ಕರಿಸಿದರು.