ಗ್ರಾ.ಪಂ. ಸತತವಾಗಿ ಮೂರನೆ ಬಾರಿ ಬಿಜೆಪಿ ಮಡಿಲಿಗೆ

ಅರಕೇರಾ.ಜ.೦೧-ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮ ಪಂಚಾಯತಿ ಚುನಾವಣೆಗೆ ವೇದಿಕೆ ಸಜ್ಜಾಗಿ ಜಿದ್ದಾಜಿದ್ದಿನ ಪೈಪೋಟಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ- ಕಾಂಗ್ರೆಸ್ ವರ್ಚಸ್ ಎಂದು ಚುನಾವಣೆಗೂ ಮುನ್ನ ಹೇಳಲಾಗುತ್ತಿತ್ತು ಆದರೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗೆಲುವು ಸಾಧಿಸುವ ಮೂಲಕ ನಿರೀಕ್ಷೆಗಳು ತಲೆಕೆಳಗಾಗಿವೆ. ಇದರಿಂದಾಗಿ ಸತತವಾಗಿ ಮೂರನೇ ಬಾರಿಗೆ ಇಲ್ಲಿನ ಗ್ರಾಮ ಪಂಚಾಯತಿ ಆಡಳಿತ ಚುಕ್ಕಾಣಿ ಬಿಜೆಪಿ ಪಕ್ಷ ಹಿಡಿಯುವ ಸಾದ್ಯತೆ ಹೆಚ್ಚಿದೆ. ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸ್ಥಾನದಲ್ಲಿ ಗೆಲ್ಲುವ ಮೂಲಕ ಹ್ಯಾಟ್ರೀಕ್ ಸಾಧನೆ ಮಾಡಿ ಸಾಕ್ಷಿಯಾಗಿದೆ.
ಇಲ್ಲಿನ ಗ್ರಾಮ ಪಂಚಾಯತಿಗೆ ಒಟ್ಟು ೮ ವಾರ್ಡಗಳಿಗೆ ೪೮ ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿದ್ದು ಸ್ಪರ್ಧೆ ಮಾಡಿದ್ದರು. ನಿನ್ನೆ ಮತ ಎಣಿಕೆಯ ಬಳಿಕ ಅಭ್ಯರ್ಥಿಗಳ ಭವಿಷ್ಯ ಹೊರಬಿದ್ದಿದು, ೨೦ ಜನ ಸದಸ್ಯರು ಗ್ರಾಮ ಪಂಚಾಯತಿಗೆ ಆಯ್ಕೆಯಾಗಿದ್ದಾರೆ. ಒಟ್ಟು ೨೦ ಸದಸ್ಯ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ೧೨ ಜನ ಸದಸ್ಯರು ಚುನಾಯಿತರಾದರೆ, ಕಾಂಗೆಸ್ ಬೆಂಬಲಿತ ೬ ಜನ ಸದಸ್ಯರು ಆಯ್ಕೆಯಾಗಿದ್ದಾರೆ ಇನ್ನುಳಿದ ೨ ಸ್ಥಾನಗಳನ್ನು ಸ್ವತಂತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಮತದಾರ ಪ್ರಭು ಮತದಾನದ ಪ್ರಭುತ್ವವನ್ನು ತೋರಿಸಿಕೊಟ್ಟಿದ್ದಾರೆ.
ಬಹು ನಿರೀಕ್ಷಿತ ಅರಕೇರಾ ಗ್ರಾಮ ಪಂಚಾಯತಿ ಫಲಿತಾಂಶ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸರಳವಾಗಿ ಗ್ರಾಮ ಪಂಚಾಯತಿ ಅಧಿಕಾರ ಹಿಡಿಯುವ ಸಾದ್ಯತೆ ಹೆಚಾಗಿದ್ದು, ಮೂರನೇ ಬಾರಿಗೆ ಗ್ರಾಮದಲ್ಲಿ ಬಿಜೆಪಿ ತೆಕ್ಕೆಗೆ ಗ್ರಾಮ ಪಂಚಾಯತಿ ಬಂದಂತಾಗಿದೆ. ಗ್ರಾಮ ಪಂಚಾಯತ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕಾಂಗ್ರಸ್ ಪಕ್ಷದ ಅಭ್ಯರ್ಥಿಗಳು. ಪಕ್ಷತೇರರ ಅಭ್ಯರ್ಥಿಗಳು ಕೂಡಾ ಅಭಿಮಾನಿಗಳಿಂದ ವಿಜಯೋತ್ಸವ ಆಚರಿಸಿಕೊಂಡರು ಗೆದ್ದವರು ಪಟಾಕಿ ,ಸಿಡಿಸಿ, ಸಿಹಿ ಹಂಚಿ, ಭರ್ಜರಿ ವಿಜಯೋತ್ಸವ ಆಚರಿಸಿಕೊಂಡರು.
ವಿಶೇಷವಾಗಿ ಪಕ್ಷತೇರ ಅಭ್ಯರ್ಥಿ ೫ನೇ ವಾರ್ಡಿನಿಂದ ಆಯ್ಕೆಯಾದ ಕಾರಣ ತಮ್ಮ ನಾಯಕ ದಿ|| ವೆಂಕಟೇಶಪೂಜಾರಿಯವರ ಭಾವಚಿತ್ರವನ್ನು ತೆರದವಾಹನದಲ್ಲಿ ಮೆರವಣಿಗೆಮಾಡುವ ಮೂಲಕ ಅವರ ಬೆಂಬಲಿಗರೊಂದಿಗೆ ಅವರ ನಿವಾಸಕ್ಕೆ ತೆರಳಿ ಸಹಿ ಹಂಚಿ ಸಂಬ್ರಮ ಆಚರಣೆ ಮಾಡಿಕೊಂಡಿದ್ದು ಗ್ರಾಮದಲ್ಲಿ ಕಂಡು ಬಂದಿತು.
ನೂತನ ಸದಸ್ಯರಿಗೆ ಸನ್ಮಾನ: ಶಾಸಕ ಕೆ.ಶಿವನಗೌಡ ನಾಯಕ ಅವರ ನಿವಾಸದಲ್ಲಿ ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದ ೧೨ ಜನ ಬಿಜೆಪಿ ಬೆಂಬಲಿತ ಸದಸ್ಯರಿಗೆ ಸನ್ಮಾನವನ್ನು ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ಸೀತಣ್ಣ ನಾಯಕ ಗುತ್ತೇದಾರ, ಮಾಜಿ ಜಿಪಂ ಸದಸ್ಯ ಡಾ.ಹೆಚ್.ಎ.ನಾಡಗೌಡ, ಜಾವೀದ್ ಆರ್.ಚಿಂಚೋಳಿಕರ್, ಜಿ.ಬೂದೇಪ್ಪ ಸಾಹುಕಾರ, ಚಂದ್ರಶೇಖರಶೆಟ್ಟಿ ಕೆ.ವಿರೇಶ ಸಾಹು, ರಾಚಯ್ಯಸ್ವಾಮಿ ಮಠಪತಿ, ,ಶೇಖರಪ್ಪಗೌಡ ಮಾಲಿಪಾಟೀಲ್. ಶಿವುಕುಮಾರ ಬಳೆ, ಇಸ್ಮಾಯಿಲ್, ಎಂ ಸಿದ್ದಪ್ಪ, ಭಾಷಾ ವೆಲ್ಡಿಂಗ್, ನಾಗರಾಜ ಕರ್ನಾಳ್, ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಇದ್ದರು.
ಕೋಟ್ :೧ ನೂತನವಾಗಿ ಗ್ರಾಮ ಪಂಚಾಯತಿಗೆ ಚುನಾಯಿತರಾದ ಪ್ರತಿ ಸದಸ್ಯರು ಗ್ರಾಮದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಪಕ್ಷ ಬೇಧವನ್ನು ಮರೆತು ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಬೇಕು.

           - ಕೆ.ಅನಂತರಾಜ ನಾಯಕ, ಬಿಜೆಪಿ ಹಿರಿಯ ಮುಖಂಡರು ಅರಕೇರಾ.

೩೧ ಅರಕೇರಾ ೧: ಶಾಸಕ ಕೆ.ಶಿವನಗೌಡ ನಾಯಕ ನಿವಾಸದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಗೆ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ಸನ್ಮಾನವನ್ನು ಮಾಡಿದರು.