ಗ್ರಾ.ಪಂ ವಿವಿಧ ಖಾಲಿ ಇರುವ, ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಃ ವೇಳಾಪಟ್ಟಿ ಪ್ರಕಟಃ ಜಿಲ್ಲಾಧಿಕಾರಿ

ವಿಜಯಪುರ, ಡಿ.9-ರಾಜ್ಯ ಚುನಾವಣಾ ಆಯೋಗವು 2021 ಜೂನ್ ಮಾಹೆಯಿಂದ 2022 ರ ಮಾರ್ಚ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ, ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದನ್ವಯ ಚುನಾವಣಾ ವೇಳಾಪಟ್ಟಿಯನ್ನು ಈ ಕೆಳಕಂಡಂತೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ ಮತ್ತು ದಿನ : 13-12-2021 (ಸೋಮವಾರ), ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ : 17-12-2021 (ಶುಕ್ರವಾರ), ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ : 18-12-2021 (ಶನಿವಾರ), ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ : 20-12-2021 (ಸೋಮವಾರ), ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ) : 27-12-2021 (ಸೋಮವಾರ), ಮರುಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ) : 29-12-2021 (ಬುಧವಾರ), ಮತಗಳ ಎಣಿಕೆ ದಿನಾಂಕ ಮತ್ತು ದಿನ (ಬೆಳಿಗ್ಗೆ 8-00 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ) : 30-12-2021 (ಗುರುವಾರ), ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೊ ಆ ದಿನಾಂಕ ಮತ್ತು ದಿನ : 30-12-2021 (ಗುರುವಾರ) ಆಗಿರುತ್ತದೆ.
ಅದರಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಸದಸ್ಯರು ಆಯ್ಕೆಯಾಗದ (ನ್ಯಾಯಾಲಯ ಪ್ರಕರಣ, ಇತರೆ ಕಾರಣಗಳಿಗಾಗಿ) ಪೂರ್ಣ ಗ್ರಾಮ ಪಂಚಾಯತಿಗಳ ವಿವರ : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆ : 26, ಕನ್ನೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸದಸ್ಯ ಸ್ಥಾನಗಳ ಸಂಖ್ಯೆ : 14 ಆಗಿರುತ್ತದೆ.
ಜಿಲ್ಲೆಯ ವಿಜಯಪುರ ತಾಲೂಕಿನ ಐನಾಪೂರ, ಆಲಮೇಲ ತಾಲೂಕಿನ ಬಗಲೂರ, ಸಿಂದಗಿ ತಾಲೂಕಿನ ಹಂದಿಗನೂರ, ರಾಂಪೂರ, ಪಿ.ಎ, ಚಡಚಣ ತಾಲೂಕಿನ ನಿವರಗಿ, ಬಬಲೇಶ್ವರ ತಾಲೂಕಿನ ಬೋಳ ಚಿಕ್ಕಲಕಿ, ತಿಕೋಟಾ ತಾಲೂಕಿನ ಹೊನವಾಡ, ನಿಡಗುಂದಿ ತಾಲೂಕಿನ ಇಟಗಿ, ವಂದಾಲ, ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ, ರಕ್ಕಸಗಿ, ಇಂಡಿ ತಾಲೂಕಿನ ಅಗರಖೇಡ, ಕ್ಯಾತನಕೇರಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯ ಸ್ಥಾನಗಳ ಸಂಖ್ಯೆ ತಲಾ 1 ಆಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.