ಗ್ರಾ.ಪಂ.ರಾಯಲ್ಟಿ ಐದು ಪಟ್ಟು ವಸೂಲಿ-ಆರೋಪ

ಮಾನ್ವಿ.ನ.19 ವಿವಿಧ ಗ್ರಾಮ ಪಂಚಾಯಿತಿ ಯಲ್ಲಿ 2018 -19 ಸಾಲಿನ ರಾಯಲ್ಟಿ ರಾಜಧನ
ಐದು ಪಟ್ಟು ವಸೂಲಿ ಮಾಡದೇ ಇರುವ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪಿಡಿಓ, ಟಿ ಎ, ಎಡಿ ಹಾಗೂ ವೆಂಡರ್ ಜಂಟಿ ಚಕ್ ಮೆಸರಮೆಂಟ್ ಮಾಡದೇ ನಿರ್ಲಕ್ಷ್ಯವಹಿಸಿ ಭ್ರಷ್ಟಾಚಾರವೆಸಗಿರುವ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ಬಸವರಾಜ ನಕ್ಕುಂದಿ ಒತ್ತಾಯಿಸಿದರು,
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ತಾಲೂಕಿನ ಎಲ್ಲಾ ಪಂಚಾಯತಿಯಲ್ಲಿ ಸಾಮಗ್ರಿ ವೆಚ್ಚ ಬಿಓಸಿ ಪಾವತಿಸುವ ಸಮಯದಲ್ಲಿ ಕಡ್ಡಾಯವಾಗಿ ರಾಜಧನ ಐದು ಪಟ್ಟು ವಸೂಲಿ ಮಾಡಬೇಕು ಎಂದು ಸರ್ಕಾರದ ನಿಯಮ ಇದೆ ಅದರೆ ಸಂಬಂಧಪಟ್ಟ ಅಧಿಕಾರಿಗಳು ವೆಂಡರ್ ಜೊತೆಯಲ್ಲಿ ಶಾಮೀಲಾಗಿ ಸರ್ಕಾರಕ್ಕೆ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ ಅಧಿಕಾರಿಗಳು ವಿರುದ್ಧ ಅನೇಕ ಬಾರಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿಸಿದ ಇರುವುದು ಪಂಚಾಯಿತಿ ಯಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು
ಬ್ಯಾಗವಾಟ್ ಗ್ರಾಮ ಪಂಚಾಯಿತಿ ಯಲ್ಲಿ 14 ನೇ ಹಣಕಾಸು ಯೋಜನೆಯಡಿಯಲ್ಲಿ 59 ಲಕ್ಷ ರೂಪಾಯಿ ಅನುದಾನದಲ್ಲಿದುರ್ಬಳಕೆ ಮಾಡಿದೆ ಅಧಿಕಾರಿಗಳವಿರುದ್ಧ ಶ್ರೀಘದಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದರು. ಕೊಡಲೇ ಅನುದಾನ ದುರ್ಬಳಕೆ ಹಾಗೂ ರಾಜಧನ ಐದು ಪಟ್ಟು ವಸೂಲಿ ಮಾಡದೇ ಭ್ರಷ್ಟಾಚಾರವೆಸಗಿರುವ ಅಧಿಕಾರಿಗಳು ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದ್ದಿರ ಶ್ರೀಘದಲ್ಲಿ ತಾ ಪ ಅಧಿಕಾರಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗವುದು ಎಂದು ಬಸವರಾಜ ನಕ್ಕುಂದಿ ಅವರು ಹೇಳಿದರು, ಈ ಸಂದರ್ಭದಲ್ಲಿ,ತಾಲೂಕು ಅಧ್ಯಕ್ಷ ಯೇಸು ಅಮರೇಶ್ವರ ಕ್ಯಾಂಪ್, ಸಿದ್ದಪ್ಪ ಅಮರಾವತಿ, ಶಿವಪ್ಪ ಸಾಧು, ಶಿವಾನಂದ ಸದಾಪೂರು, ಸಂದೀಪ ಕುರ್ಡಿ, ಇನ್ನಿತರ ಉಪಸ್ಧಿತಿರ ಇದ್ದರು.