ಗ್ರಾ.ಪಂ. ಮರು ಚುನಾವಣೆ ಬಿಜೆಪಿಗೆ ಭರ್ಜರಿ ಜಯ

ಹನೂರು:ಮಾ:31: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಪಡಸಲನತ್ತ ಗ್ರಾಮದ ಮರು ಚುನಾವಣೆಯಲ್ಲಿ ಬಿಜೆಪಿ (ಜನಧ್ವನಿ ಬಿ.ವೆಂಕಟೇಶ್) ಬೆಂಬಲಿತ ಅಭ್ಯರ್ಥಿ ಮಾದೇಶ್ ಎನ್ ಭರ್ಜರಿ ಜಯ ಗಳಿಸಿದ್ದಾರೆ.
ಹನೂರು ಪಟ್ಟಣದ ಸರ್ಕಾರಿ ಶಾಲೆಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಕೇವಲ 37 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಮಾದೇಶ್ ವಿರುದ್ಧ ಪರಾಭವಗೊಂಡರು.
ಮತ ಎಣಿಕೆ ಕಾರ್ಯದಲ್ಲಿ ಬಿ.ಆರ್.ಸಿ.ಕ್ಯಾತ, ಚುನಾವಣೆ ಶೀರೆಸ್ಧಾರ ಸುರೇಶ್, ದೊಡ್ಡಿಂದುವಾಡಿ ಶಿವಣ್ಣ, ಗ್ರಾಮ ಲೆಕ್ಕಿಗ ಶೇಷಣ್ಣ ಇದ್ದರು.
ಚುನಾವಣಾಧಿಕಾರಿ ಟಿ.ಆರ್.ಸ್ವಾಮಿ ಚುನಾವಣೆಯಲ್ಲಿ ಗ್ರಾ.ಪಂ.ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಪ್ರಮಾಣ ಪತ್ರವನ್ನು ವಿತರಿಸಿದರು.
ಇತಿಹಾಸ ಸೃಷ್ಟಿಸಿದ ಬಿ.ವೆಂಕಟೇಶ್: ಮ.ಮ.ಬೆಟ್ಟ ಗ್ರಾ.ಪಂ. ಒಟ್ಟು 32 ಸ್ಥಾನಗಳ ಪೈಕಿ ಬಿ.ವೆಂಕಟೇಶ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 29 ಸ್ಥಾನಗಳನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇಂತಹ ದಾಖಲೆ ಮತ್ತು ಇತಿಹಾಸ ಸೃಷ್ಟಿಸಲು ಜನಾಶ್ರಯ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಬಿ.ವೆಂಕಟೇಶ್ ಕಾರಣರಾಗಿದ್ದಾರೆ ಎಂದು ಮುಖಂಡರುಗಳು ಹಾಗೂ ವಿಜೇತ ಸದಸ್ಯರುಗಳು ತಿಳಿಸಿದ್ದಾರೆ.