ಗ್ರಾ.ಪಂ. ಪ್ರತಿನಿಧಿಗಳಿಂದಲೇ ಗ್ರಾಮದ ಅಭಿವೃದ್ಧಿ

ಶಿಗ್ಗಾವಿ,ಜ4:ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷ ಸೋತಿಲ್ಲ, ಬದಲಾಗಿ ವಿರೋಧ ಪಕ್ಷವಾಗಿರುವ ಬಿಜೆಪಿಯ ಜಾತಿ ಪಿತೂರಿಯಿಂದ ಸೋತಿದೆ ಎಂದು ಕಾಂಗ್ರೇಸ್ ಮುಖಂಡ ಹಾಗೂ ಮಾಜಿ ವಿಪ ಸದಸ್ಯ ಸೋಮಣ್ಣ ಬೇವಿನಮರದ ಹೇಳಿದರು.
ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಬೆಂಬಲಿತ ಅಭ್ಯರ್ಥಿಗಳಿಗೆ ಆಮಿಷಗಳನ್ನು ಒಡ್ಡುವ ತಂತ್ರಗಾರಿಕೆಯನ್ನು ಬಿಜೆಪಿ ಮಾಡುತ್ತದೆ.ಇದಕ್ಕೆ ನೂತನ ಸದಸ್ಯರು ಕಿವಿಕೊಡಬೇಡಿ. ಗ್ರಾಮ ಮಟ್ಟದ ನಿಜವಾದ ಅಭಿವೃದ್ದಿಯನ್ನು ಬಯಸುವ ಮುಖಂಡರೆಂದರೆ ಅವರೆ ಗ್ರಾಪಂನ ಜನಪ್ರತಿನಿಧಿಗಳು ಎಂದರು.
ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ ಮಾತನಾಡಿ ನಿಮಗೆ ಬಂದ ಅಧಿಕಾರವನ್ನು ಗ್ರಾಮದ ಕಟ್ಟೆಕಡೆಯ ಮನುಷ್ಯನಿಗೂ ಮುಟ್ಟಿಸುವ ಕಾರ್ಯ ಮಾಡಿ, ಗ್ರಾಮ ಸ್ವರಾಜ್ಯ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಎಂದರು.
ಮಾಜಿ ಸಚಿವ ಬಸವರಾಜ ಶಿವಣ್ಣವರ ಮಾತನಾಡಿ ಕಾಂಗ್ರೇಸ್ ಶಿಗ್ಗಾವಿಯಲ್ಲಿ ಇಲ್ಲ ಎಂಬುವ ವಾತಾವರಣವನ್ನ ಸೃಷ್ಟಿ ಮಾಡಿದ್ದರು. ಆದರೆ ಇಂದಿನ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಅಬ್ಯರ್ಥಿಗಳನ್ನು ನೋಡಿದರೇ ಬಿಜೆಪಿಯವರಿಗೆ ಸಹಿಸಲಾಗದಾಗಿದೆ, ಖಾದ್ರಿಯವರ ಸಂಘಟನೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಭಲಿಷ್ಟವಾಗಿದೆ ಎಂಬುದನ್ನು ಜನತೆ ಸಾಬೀತು ಮಾಡಿದ್ದಾರೆ ಎಂದರು.
ಕೆಪಿಸಿಸಿ ರಾಜ್ಯ ಸದಸ್ಯ ಷಣ್ಮೂಕಪ್ಪ ಶಿವಳ್ಳಿ ಮಾತನಾಡಿ ಸೋಲಿನಲ್ಲಿಯೂ ಕಾರ್ಯಕರ್ತರ ಗೆಲುವನ್ನು ಕಂಡವರು ಖಾದ್ರಿಯವರು ಅವರ ಆ ಸಂಘಟನಾ ಚತುರತೆ ನಮಗೆ ಮಾದರಿಯಾಗಿದೆ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನೂ ಬೆಳೆಸೋಣ ಜೊತೆಗೆ ಗ್ರಾಮಮಟ್ಟದಲ್ಲಿ ಕಾರ್ಯಕರ್ತರ ಬೆನ್ನಿಗೆ ನಿಲ್ಲೋಣ, ನ್ಯಾಯದೊರಕಿಸೋಣ ಎಂದರು.
ಇದೇ ಸಂದರ್ಭದಲ್ಲಿ ಬಾಪುಗೌಡ ಪೋಲೀಸಗೌಡ್ರ, ನಾಗರಾಜ ಜವಾಯಿ, ನಾಗಪ್ಪ ಅಣ್ಣಿಗೇರಿ, ಸಾತಪ್ಪ ದೇಸಾಯಿ, ದೇವಣ್ಣ ಬಡಿಗೇರ ಸೇರಿದಂತೆ 20 ಕ್ಕೂ ಹೆಚ್ಚು ಮುಖಂಡರು ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆಯಾದರು.
ನಂತರ ತಾಲೂಕಿನ ಕಾಂಗ್ರೇಸ್ ಬೆಂಬಲಿತ ಗ್ರಾಪಂ ಸದಸ್ಯರನ್ನು ಬ್ಲಾಕ್ ಕಾಂಗ್ರೇಸ್ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಂ ಎನ್ ವೆಂಕೋಜಿ, ಸವಣೂರ ಅದ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಸಂಜೀವಕುಮಾರ ನೀರಲಗಿ, ಎಂ ಜಾವೇದ್, ಶ್ರೀಕಾಂತ ಪೂಜಾರ, ಎಸ್ ಎಫ್ ಮಣಕಟ್ಟಿ, ಗುಡ್ಡಪ್ಪ ಜಲದಿ, ಚಂದ್ರಣ್ಣ ನಡುವಿನಮನಿ, ಎಫ್ ಸಿ ಪಾಟೀಲ, ಎಂ ಎಂ ಗೌಡರ್, ಶಿವಾನಂದ ಬಾಗೂರ, ಮುನ್ನಾ ಗುಲ್ಮಿ, ಸಿ ಎಸ್ ಪಾಟೀಲ, ರಮೇಶ ದುಗ್ಗತ್ತಿ, ಹನುಮಂತ ಬಂಡಿವಡ್ಡರ, ಯೂಸಬ್ ಸಾಬ್ ಭಾವಿಕಟ್ಟಿ, ವಸಂತಾ ಬಾಗೂರ, ಪ್ರದೀಪ ಗಿರಡ್ಡಿ, ಎ ಸಿ ಜಮಾದರ, ಮಜೀದ್ ಮಾಳಗೀಮನಿ, ಕಿರಣ ಪಾಟೀಲ, ಗಣಪತಿ ಗುಣೋಜಿ, ಗಂಜೇನವರ, ಸಣ್ಣಪ್ಪ ಮೊರಬದ್, ಮಾಲತೇಶ ಸಾಲಿ, ಬಿ ಸಿ ಪಾಟೀಲ ಸೇರಿದಂತೆ ಇತರ ಕಾಂಗ್ರೇಸ್ ಮುಖಂಡೆರು ಮತ್ತು ಕಾರ್ಯಕರ್ತರು ಇದ್ದರು.