ಗ್ರಾ.ಪಂ ಪಿಡಿಒ ಹಾಗೂ ಅಧ್ಯಕ್ಷೆ ಪ್ರತಿದೂರು ದಾಖಲುಅತನೂರ ಪಿಡಿಒ ವಿರುದ್ಧ ಗ್ರಾ.ಪಂ ಅಧ್ಯಕ್ಷೆ ಪ್ರತಿ ದೂರು

ಅಫಜಲಪುರ:ಏ.13: ಅತನೂರ ಗ್ರಾಪಂ ಪಿಡಿಒ ಅನುಸೂಯಾ ಅಷ್ಟಗಿ ವಿರುದ್ಧ ಗ್ರಾಪಂ ಅಧ್ಯಕ್ಷೆ ಸಂಗೀತಾ ಕಾಂಬಳೆ ರೇವೂರ(ಬಿ) ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಾರ್ಚ್ 27ರಂದು ಪಿಡಿಒ ಪೆÇೀಲಿಸ್ ಠಾಣೆಗೆ ತೆರಳಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಕಾಂಬಳೆ, ಆಕೆಯ ಪತಿ ನಾಗೇಶ್ ಕಾಂಬಳೆ, ಮೈದುನ ಸುಧಾಕರ ಕಾಂಬಳೆ ಸೇರಿ ಮೂವರು ನನಗೆ ಬೋಗಸ್ ಬಿಲ್ ಸೃಷ್ಟಿಸಿ ಚೆಕ್ ಬರೆದು ಕೊಡಿ ಎಂದು ಕಿರುಕುಳ ನೀಡಿದ್ದಾರೆ ಎಂದು ಪಿಡಿಒ ಅನುಸೂಯಾ ಅಷ್ಟಗಿ ರೇವೂರ(ಬಿ) ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಈಗ ಗ್ರಾಪಂ ಅಧ್ಯಕ್ಷೆ ಸಂಗೀತಾ ಕಾಂಬಳೆ ಪ್ರತಿ ದೂರು ದಾಖಲಿಸಿ, ಅತನೂರ ಗ್ರಾಪಂ ಅಧ್ಯಕ್ಷೆಯಾಗಿ ನಾನು ಗ್ರಾಮದ ಅಭಿವೃದ್ಧಿ ಕೆಲಸಗಳ ಮಾಹಿತಿ ಕೇಳಿದಾಗ ಯಾವುದೇ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಕೊಡದೆ ತಮ್ಮ ಇಷ್ಟಬಂದಂತೆ ವರ್ತಿಸುತ್ತಿದ್ದಾರೆ.

ಮಾರ್ಚ್ 27ರಂದು ಗ್ರಾ.ಪಂ ನ ತಮ್ಮ ಕೋಣೆಗೆ ಕರೆಸಿ ನನ್ನ ತಂದೆ ಪಿಎಸ್‍ಐ ಇದ್ದಾರೆ. ನಾನು ಹೇಳಿದಂತೆ ಕೇಳದಿದ್ದರೆ ನಿನ್ನ ಮತ್ತು ನಿನ್ನ ಗಂಡನ ಗೃಹಚಾರ ಬಿಡಿಸುತ್ತೇನೆ. ನನ್ನ ಸರ್ವಿಸ್ನಲ್ಲಿ ನಿನ್ನಂತ ಅಧ್ಯಕ್ಷರನ್ನು ಬಹಳ ಜನರಿಗೆ ನೋಡಿದ್ದೇನೆ. ಅವರ ಮೇಲೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೋರ್ಟಿಗೆ ಅಲೆದಾಡುವಂತೆ ಮಾಡಿದ್ದೇನೆ. ನಿನಗೂ ಅದೇ ರೀತಿ ಮಾಡುತ್ತೇನೆ ಎಂದು ಏರು ಧ್ವನಿಯಲ್ಲಿ ಹೆದರಿಸಿದ್ದು, ಅಷ್ಟರಲ್ಲಿ ನನ್ನ ಗಂಡ ಗ್ರಾಪಂಗೆ ಬಂದಾಗ ಅವಾಚ್ಯ ಶಬ್ದಗಳಿಂದ ಏಕವಚನದಲ್ಲಿ ಮಾತನಾಡಿದ್ದಾರೆ.ಅಲ್ಲದೇ ನಾನು ಹೇಳಿದ ಹಾಗೆ ಕೇಳದೆ ಹೋದರೆ ನಿನ್ನ ಮತ್ತು ನಿನ್ನ ಗಂಡನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಫಐಆರ್ ನಲ್ಲಿ ಉಲ್ಲೇಖಿಸಲಾಗಿದೆ.