ಗ್ರಾ.ಪಂ.ನೂತನ ಅಧ್ಯಕ್ಷರಿಗೆ ಸನ್ಮಾನ

ಬಾದಾಮಿ,ಆ1: ವಿರೋಧ ಪಕ್ಷದ ನಾಯಕರು,ಶಾಸಕರಾದ ಸಿದ್ದರಾಮಯ್ಯನವರ ವತಿಯಿಂದ ತಾಲೂಕಿನ ಕಾತರಕಿ ಗ್ರಾಮ ಪಂಚಾಯತಿಗೆ ನೂತನ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕಾತರಕಿ ಗ್ರಾಮದ ಬಿ.ಆರ್.ಪಾಟೀಲ ಇವರನ್ನು ನಗರದ ಶಾಸಕರ ಕಚೇರಿಯಲ್ಲಿ ಯುವ ಮುಖಂಡ ಹೊಳಬಸು ಶೆಟ್ಟರ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಮುಚಖಂಡಯ್ಯ ಹಂಗರಗಿ, ಪಿ.ಆರ್.ಗೌಡರ, ಎಫ್.ಆರ್.ಪಾಟೀಲ, ಗುಳೇದಗುಡ್ಡ ಬ್ಲಾಕ್ ಅದ್ಯಕ್ಷ ಸಂಜಯ ಬರಗುಂಡಿ, ರಂಗನಗೌಡ ಗೌಡರ, ಮಹೇಶ ದೇವರಮನಿ, ರಂಗು ಗೌಡರ, ಕಾತರಕಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮುಖಂಡರು ಹಾಜರಿದ್ದರು.