ಗ್ರಾ. ಪಂ. ನಿಂದ ಕ್ರೀಡಾ ಸಾಮಗ್ರಿ ವಿತರಣೆ

ಬೀದರ:ಜು.29: ತಾಲೂಕಿನ ಆಣದೂರ ಗ್ರಾಮದ ಸರ್ವಜ್ಞ ಪ್ರಾಥಮಿಕ ಮತ್ತ ಪ್ರೌಢ ಶಾಲೆಯಲ್ಲಿ ಇಂದು ಗ್ರಾಮ ಪಂಚಾಯತ ಆಣದೂರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಕ್ರೀಡಾ ಸಾಮಾಗ್ರಿಗಳನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಶ್ರೀನಿವಾಸರೆಡ್ಡಿ ನರಸಾರೆಡ್ಡಿ ವಿತರಣೆ ಮಾಡಿದರು. ವಿದ್ಯಾರ್ಥಿಗಳನುದ್ದೇಶಿಸಿ ಪಠ್ಯ-ಪುಸ್ತಕ ಚಟುವಟಿಕಗಳಿಗೂ ಒತ್ತು ನೀಡಬೇಕು ಅದರಲ್ಲೂ ಕ್ರೀಢೆ ಮಕ್ಕಳ ದೈಹಿಕ ವಿಕಾಸ, ಬೌಧಿಕ ವಿಕಾಸ, ಕ್ರೀಯಾಶಿಲತೆಯನ್ನು ವೃದ್ದಿಸುತ್ತದೆ. ಪ್ರತಿಭೆ ಅನಾವರಣಗೊಳ್ಳುತ್ತದೆ. ಒಟ್ಟಾಗಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ವಿವಿಧ ಕ್ರೀಢೆಗಳು ಕಾರಣವಾಗುವದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮ ವಿಕಾಸ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಅವರು, ಪಾಲಕರಿಗೆ ಮತ್ತು ಶಿಕ್ಷಣ ಸಂಸ್ಥೆಯವರಿಗೆ ಫಲಿತಾಂಶವೇ ಮುಖ್ಯವಾಗಿರುತ್ತಿರುವುದರಿಂದ ಮಕ್ಕಳಲ್ಲಿ ಕ್ರೀಡಾ ಮನೋಭಾವ, ಕ್ರೀಡಾ ಸ್ವರ್ದೆ ಕುಂಠಿತವಾಗುತ್ತಿದೆ. ಈ ಬೆಳವಣಿಗೆ ವಿದ್ಯಾರ್ಥಿಗಳ ಭವಿಷ್ಯ ಹಾಗೂ ರಾಷ್ಟ್ರದ ಪ್ರಗತಿಗೆ ಉತ್ತಮವಾದುದಲ್ಲ. ಶಿಕ್ಷಣ ಸಂಸ್ಥೆಯವರು ಪಾಠ ಪ್ರವಚಗಳಿಗೆ ಒತ್ತು ಕೊಡುವಂತೆ ಕ್ರೀಡೆಗಳಿಗೂ ಕೊಡಬೇಕು ದೇಶಿ ಆಟಗಳನ್ನು ಪ್ರಚುರಗೊಳಿಸಬೇಕು. ಪ್ರತಿ ಶಾಲೆಗಳು ಆಟದ ಮೈದಾನ ಹೊಂದಿರುವುದು ಅವಶ್ಯಕವಾಗಿದೆ. ಪಂಚಾಯತ ಮಟ್ಟ, ಹೊಬಳಿ, ತಾಲೂಕಾ, ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಪಟುವಾಗಿ ತಮ್ಮ ಪ್ರತಿಭೆ ಪ್ರದರ್ಶಿಸಲು ಸೂಕ್ತ ತರಬೇತಿ, ಸೌಲಭ್ಯ ಸಿಗಲು ಶಾಲೆ ಸ್ಥಳಿಯ ಸಂಸ್ಥೆಗಳು ಮತ್ತು ಸರ್ಕಾರಗಳು ಮುಂದೆ ಬರಬೇಕಾಗಿದೆ ಎಂದರು.

ಕ್ರೀಡಾ ಸಾಮಾಗ್ರಿಗಳವಿತರಣಾ ಕಾರ್ಯಕ್ರಮದಲ್ಲಿ ಗ್ರಾ. ಪಂ. ಸದಸ್ಯರಾದ ಶ್ರೀ ಶಾಂತಕುಮಾರ ಬಶೆಟ್ಟಿ ಯುವ ಮುಖಂಡರಾದ ಶ್ರೀ ರಾಜಕುಮಾರ ಫೋಳ್, ಆಣದೂರ ಪಂಚಾಯತ ಜೆ.ಇ. ಆದ ಶ್ರೀ ಶರಣಪ್ಪಾ ಅವರು ಸಹಾಯಕ ಜೆ.ಇ. ಆದ ಶ್ರೀ ಸುಭಾಷ ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆ ಸರ್ವಜ್ಞ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ದೀಪಿಕಾ ಪಿಂಜರೆ ಮಾಡಿದರೆ, ಸ್ವಾಗತ ಶ್ರೀಮತಿ ಗೀತಾ ಶಂಕರ ನಡೆಸಿಕೊಟ್ಟರೆ, ವಂದನಾರ್ಪಣೆ ಸಹ ಶಿಕ್ಷಕರಾದ ಶ್ರೀ ಸಂತೋಷ ಮಾಡಿದರು.