ಸಿರವಾರ,ಜೂ.೦೯-
ತಾಲೂಕಿನ ಬಾಗಲವಾಡ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ನರೇಗಾ ದೂರದೃಷ್ಟಿ ಯೋಜನೆ ಗ್ರಾಮ ಸಭೆ ಶುಕ್ರವಾರ ನಡೆಯಿತು.
ದೂರದೃಷ್ಟಿ ಯೋಜನೆಯನ್ನು ಗ್ರಾಪಂ ಮಟ್ಟದಲ್ಲಿ ಐದು ವರ್ಷಗಳಲ್ಲಿ ಏನೇನು ಮಾಡಬಹುದು ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ಜನವಸತಿ ಸಭೆ, ವಾರ್ಡ್ ಸಭ ಮತ್ತು ಗ್ರಾಮಸಭೆಗಳ ಸದಸ್ಯರು, ಇರುವ ಸಂಪನ್ಮೂಲಗಳು, ಜನರ ಸಮಸ್ಯೆಗಳು ಮತ್ತು ಅಗತ್ಯಗಳನ್ನು ಆಧಾರವಾಗಿಟ್ಟುಕೊಂಡು ಯೋಜನೆ ತಯಾರಿಸಲಾಗುತ್ತದೆ.
ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಸಮಗ್ರ ಅಭಿವೃದ್ಧಿ ಸಾಧಿಸುವ ದಿಕ್ಕಿನಲ್ಲಿ ಈ ಸಭೆಯನ್ನು ನಡೆಸಲಾಗುತ್ತದೆ ಎಂದು ಪಿಡಿಒ ಶರಣಪ್ಪ ಮಾಹಿತಿ ನೀಡಿದರು.
ಈ ವೇಳೆ ಗ್ರಾ.ಪಂ ಸದಸ್ಯರು, ಕೂಲಿ ಕಾರ್ಮಿಕರ ಸಂಘದ ಮೇಟಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮಲ್ಲಪ್ಪ ಸೂಡಿ, ನರೇಂದ್ರ ನಡುಗಡ್ಡೆ ಕ್ಯಾಂಪ್, ಗಂಗಾಧರ ಬಾಗಲವಾಡ, ಮೌನೇಶ ಕೋರಿ, ನಾಗರಾಜ್ ಹಿಂದಿನಮನೆ, ಶಿವಗೇನಿ ನಾಯಕ, ಆಂಜನೇಯ, ಯಾದವ್, ಜಗದೀಶ ಸಾಲಮನಿ, ಅಮರೇಶ ಗ್ರಾಕೂಸ್, ಹುಸೇನಪ್ಪ ನಾಯಕ, ಭೀರಪ್ಪ ಪಂಪಾಪತಿ ಚಾಗಿ, ಗ್ರಾಮ ಸಿಬ್ಬಂದಿ ಅಮರೇಶ ಆಪರೇಟರ್, ಮಲ್ಲಿಕಾಜು೯ನ ಗುತ್ತೇದಾರ ಇದ್ದರು.