ಗ್ರಾ.ಪಂ ಚುನಾವಣೆ-ಸುಳ್ಯದಲ್ಲಿ ಕಾಂಗ್ರೆಸ್ ದೂಳಿಪಟ- ೧೮ ಪಂಚಾಯಿತಿಗಳಲ್ಲಿ ಬಿ.ಜೆ.ಪಿಗೆ ಪ್ರಚಂಡ ಗೆಲುವು

ಸುಳ್ಯ, ಡಿ.೩೧-ಸುಳ್ಯದ ಒಟ್ಟು ೨೫ ಗ್ರಾಮ ಪಂಚಾಯಿತಿಗಳಲ್ಲಿ ೧೮ ಪಂಚಾಯಿತಿಗಳಲ್ಲಿ ಬಿ.ಜೆ.ಪಿ ಬೆಂಬಲಿತರು ಅತ್ಯಧಿಕ ಸಂಖ್ಯೆಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದು, ೫ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ. ಐವರ್ನಾಡು ಮತ್ತು ದೇವಚಳ್ಳ ಪಂಚಾಯಿತಿಗಳಲ್ಲಿ ಸ್ವಾಭಿಮಾನಿ ಬಳಗ ಅಧಿಕಾರಕ್ಕೆ ಬಂದಿದ್ದು, ೨೮೨ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ೧೬೮ ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ಬೆಂಬಲಿತ ೭೯ ಸದಸ್ಯರು ವಿಜಯಿ ಆಗಿದ್ದಾರೆ. ಪಕ್ಷೇತರರು ೩೫ ಕಡೆಗಳಲ್ಲಿ ವಿಜಯಿ ಆಗಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಗ್ರಾ.ಪಂನಲ್ಲಿ ಒಟ್ಟು ೧೪ ಸ್ಥಾನಗಳಿದ್ದು ಇದರಲ್ಲಿ ಕಾಂಗ್ರೆಸ್ ಬೆಂಬಲಿತ ೧೩ ಸದಸ್ಯರು ಮತ್ತು ೧ ಬಿಜೆಪಿ ಬೆಂಬಲಿತರು ಆಯ್ಕೆ ಆಗಿದ್ದಾರೆ. ಅರಂತೋಡು ಗ್ರಾ.ಪಂನಲ್ಲಿ ೧೫ ಸ್ಥಾನಗಳಲ್ಲಿ ೧೧ ಸ್ಥಾನಗಳು ಬಿಜೆಪಿ ಪಾಲಾದರೆ ಕೇವಲ ತಲಾ ೨ ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಮತ್ತು ಪಕ್ಷೇತರರ ಪಾಲಾದವು. ಆಲೆಟ್ಟಿ ಗ್ರಾ.ಪಂನ ೨೧ ಸ್ಥಾನಗಳಲ್ಲಿ ೧೩ ವಾರ್ಡ್‌ಗಳಲ್ಲಿ ಬಿಜೆಪಿ ಬೆಂಬಲಿತರು ವಿಜಯಿ ಆದರೆ ೮ ವಾರ್ಡ್‌ಗಳಲ್ಲಿ ಕಾಂಗ್ರೆಸ್ ವಿಜಯಿ ಆಗಿದ್ದಾರೆ. ಮಂಡೆಕೋಲು ಗ್ರಾ.ಪಂನ ೧೫ ಸ್ಥಾನಗಳಲ್ಲಿ ೧೪ ಬಿಜೆಪಿ ಮತ್ತು ಒಬ್ಬ ಕಾಂಗ್ರಸ್ ಸದಸ್ಯ ಆಯ್ಕೆ ಆಗಿದ್ದಾರೆ. ಅಜ್ಜಾವರ ಗ್ರಾ.ಪಂನ ೧೮ ಸ್ಥಾನಗಳಲ್ಲಿ ೧೦ ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆ ಆಗಿದ್ದಾರೆ. ಇದರಲ್ಲಿ ೫ ಸ್ಥಾನಗಳು ಬಿಜೆಪಿ ಪಾಲಾಗಿದೆ. ಮೂರು ಕ್ಷೇತ್ರದಲ್ಲಿ ಪಕ್ಷೇತರರು ಜಯ ಗಳಿಸಿದ್ದಾರೆ. ಕನಕಮಜಲು ಗ್ರಾಪಂನಲ್ಲಿ ೭ ಸ್ಥಾನಗಳಿದ್ದು, ಬಿಜೆಪಿಯ ೫ ಮತ್ತು ಕಾಂಗ್ರೆಸ್ ೨ ಸದಸ್ಯರನ್ನು ಪಡೆದುಕೊಂಡಿದೆ. ಜಾಲ್ಸೂರು ಗ್ರಾ.ಪಂ.ನಲ್ಲಿ ೧೭ ಸ್ಥಾನಗಳಿದ್ದು ಬಿಜೆಪಿ ೧೧ ಮತ್ತು ಕಾಂಗ್ರೆಸ್ ೩ ಸದಸ್ಯರರು ಮತ್ತು ೩ ಮಂದಿ ಪಕ್ಷೇತರರು ಆಯ್ಕೆ ಆಗಿದ್ದಾರೆ. ಐವರ್ನಾಡು ಪಂಚಾಯಿತಿನಲ್ಲಿ ೧೩ ಸ್ಥಾನಗಳಿದ್ದು ಇದರಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ ಸ್ವಾಭಿಮಾನಿ ಬಳಗ ೧೨ ವಾರ್ಡ್‌ಗಳಲ್ಲಿ ಗೆದ್ದು ಅಧಿಕಾರಿ ಪಡೆದುಕೊಂಡಿದೆ. ಒಂದು ಕ್ಷೇತ್ರ ಪಕ್ಷೇತರ ಪಾಲಾಗಿದೆ. ಅಮರಮೂಡ್ನೂರು ಗ್ರಾ.ಪಂನಲ್ಲಿ ಒಟ್ಟು ೧೭ ಸ್ಥಾನಗಳಿದ್ದು ಇದರಲ್ಲಿ ೧೧ ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾದರೆ ೪ ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಮತ್ತು ೨ ಪಕ್ಷೇತರರು ಆಯ್ಕೆ ಆಗಿದ್ದಾರೆ. ಕಳಂಜ ಗ್ರಾ,ಪಂನಲ್ಲಿ ೬ ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಕ್ಲೀನ್ ಸ್ಲೀಪ್ ಮಾಡಿದೆ. ಬೆಳ್ಳಾರೆ ಗ್ರಾ.ಪಂನಲ್ಲಿ ಒಟ್ಟು ೧೪ ಸ್ಥಾನಗಳಿದ್ದು ಬಿಜೆಪಿಯ ೮ ವಾರ್ಡ್‌ಗಳಲ್ಲಿ ಜಯಗಳಿಸಿ ಅಧಿಕಾರಿ ಒಲಿಸಿಕೊಂಡಿದ್ದಾರೆ. ಕಾಂಗ್ರೆಸ್ಸಿನ ೪ ಸದಸ್ಯರು ಮತ್ತು ಇಬ್ಬರು ಎಸ್‌ಡಿಪಿಐ ಸದಸ್ಯರು ವಿಜಯಿ ಆಗಿದ್ದಾರೆ. ಪೆರುವಾಜೆ ಗ್ರಾ.ಪಂನಲ್ಲಿ ೮ ಸ್ಥಾನಗಳಿದ್ದು ಕಾಂಗ್ರೆಸ್ ಬೆಂಬಲಿತರು ೫ ವಾರ್ಡ್‌ಗಳಲ್ಲಿ ಜಯಗಳಿಸಿ ಅಧಿಕಾರ ಪಡೆದುಕೊಂಡಿದ್ದಾರೆ. ಮತ್ತು ಬಿಜೆಪಿಯ ೩ ಅಭ್ಯರ್ಥಿಗಳು ವಿಜಯಿ ಆಗಿದ್ದಾರೆ. ಬಾಳಿಲ ಗ್ರಾ.ಪಂನಲ್ಲಿ ೧೦ ಸ್ಥಾನಗಳಿದ್ದು ೯ ಬಿಜೆಪಿ ಸದಸ್ಯರು ಮತ್ತು ಒಬ್ಬರು ಕಾಂಗ್ರಸ್ ಸದಸ್ಯರು ಜಯ ಗಳಿಸಿದ್ದಾರೆ. ಕಲ್ಮಡ್ಕದಲ್ಲಿ ೯ ಸ್ಥಾನಗಳಿದ್ದು ಎಲ್ಲಾ ೯ ಸ್ಥಾನಗಳನ್ನು ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪಂಜ ಪಂಚಾಯಿತಿನಲ್ಲಿ ಒಟ್ಟು ೧೩ ಸ್ಥಾನಗಳಿದ್ದು ೧೦ ಸ್ಥಾನಗಳು ಬಿಜೆಪಿ ಪಾಲಾದರೆ ೩ ರಲ್ಲಿ ಕಾಂಗ್ರೆಸ್ ವಿಜಯಿ ಆಗಿದೆ. ಹರಿಹರ ಪಲ್ಲತಡ್ಕ ಪಂಚಾಯಿತಿಯ ಒಟ್ಟು ೬ ಸ್ಥಾನಗಳಲ್ಲಿ ೫ ಸ್ಥಾನಗಳು ಬಿಜೆಪಿಗೆ ಮತ್ತು ೧ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ. ಕೊಲ್ಲಮೊಗ್ರ ಪಂಚಾಯಿತಿಯ ಒಟ್ಟು ೮ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿ ಪಂಚಾಯಿತಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಮಡಪ್ಪಾಡಿ ಗ್ರಾ.ಪಂ.ನ ೪ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ೧ ಸ್ಥಾನ ಬಿಜೆಪಿ ಪಾಲಾಗಿದೆ. ಗುತ್ತಿಗಾರು ಗ್ರಾ.ಪಂ ೧೭ ಸ್ಥಾನಗಳಲ್ಲಿ ಬಿಜೆಪಿ ೧೩ ಸ್ಥಾನಗಳಲ್ಲಿ ಗಳಿಸಿದ್ದಾರೆ. ಉಳಿದ ೪ ಸ್ಥಾನಗಳಲ್ಲಿ ಪಕ್ಷೇತರರು ಜಯಗಳಿಸಿದ್ದಾರೆ. ದೇವಚಳ್ಳ ಗ್ರಾ.ಪಂ.ನ ೧೦ ಸ್ಥಾನಗಳಲ್ಲಿ ಸ್ವಾಭಿಮಾನಿ ಬಳಗ ೫ ಕಡೆ ಜಯಗಳಿಸಿ ಅಧಿಕಾರಕ್ಕೆ ಬಂದಿದೆ. ೪ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ವಿಜಯಿ ಮತ್ತು ಒಂದರಲ್ಲಿ ಕಾಂಗ್ರೆಸ್ ಬೆಂಬಲಿತ ವಿಜಯಿ ಆಗಿದ್ದಾರೆ. ನೆಲ್ಲೂರು ಕ್ರೆಮಾಜೆಯ ೮ ಸ್ಥಾನಗಳಲ್ಲಿ ೬ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿದ್ದರೆ, ೨ ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಜಯಗಳಿಸಿದ್ದಾರೆ. ಉಬರಡ್ಕ ಮಿತ್ತೂರು ಪಂಚಾಯಿತಿಯ ಒಟ್ಟು ೯ ಸ್ಥಾನಗಳಲ್ಲಿ ೬ ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದು ೩ ಸ್ಥಾನ ಕಾಂಗ್ರೆಸ್ ಬೆಂಬಲಿತರು ಗೆದ್ದುಕೊಂಡಿದ್ದಾರೆ. ಮರ್ಕಂಜ ಗ್ರಾ.ಪಂ. ನ ೯ ಸ್ಥಾನಗಳಲ್ಲಿ ೭ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದು ತಲಾ ಒಂದರಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಗೆದ್ದಿದ್ದಾರೆ. ಕೊಡಿಯಾಲ ಗ್ರಾ.ಪಂನ ೬ ಸ್ಥಾನಗಳಲ್ಲಿ ಬಿಜೆಪಿ ೪ ಸದಸ್ಯರು ಮತ್ತು ಕಾಂಗ್ರೆಸಿನ ಬೆಂಬಲಿತದ ೨ ಮಂದಿ ಆಯ್ಕೆ ಆಗಿದ್ದಾರೆ. ಮುರುಳ್ಯ ಗ್ರಾ.ಪಂನ ಒಟ್ಟು ೭ ಸ್ಥಾನಗಳಲ್ಲಿ ಬಿಜೆಪಿ ಎಲ್ಲಾ ಸ್ಥಾನಗಳನ್ನು ಗೆದ್ದು ಕ್ಲಿನ್ ಸ್ವೀಪ್ ಮಾಡಿಕೊಂಡಿದೆ.