ಗ್ರಾ.ಪಂ. ಚುನಾವಣೆ ಶೇ 86.10 ರಷ್ಟು ಮತದಾನ

ಬ್ಯಾಡಗಿ,ಮಾ30: ತಾಲೂಕಿನ ಕಾಗಿನೆಲೆ ಹಾಗೂ ತಡಸ ಗ್ರಾಮ ಪಂಚಾಯತಿಗಳ 29 ಸ್ಥಾನಗಳಿಗೆ ದಿ.29 ರಂದು ಜರುಗಿದ ಚುನಾವಣೆಯಲ್ಲಿ ಶೇ.86.10 ರಷ್ಟು ಮತದಾನವಾಗಿದೆ.

ಸೋಮವಾರ ಜರುಗಿದ ತಾಲೂಕಿನ ಎರಡು ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಕಾಗಿನೆಲೆ ಗ್ರಾಮ ಪಂಚಾಯತಿಯ ನಾಗಲಾಪೂರ ಗ್ರಾಮದ ಮತಗಟ್ಟೆಯಲ್ಲಿ (ಶೇ. 93.68) ಅತಿ ಹೆಚ್ಚು ಮತದಾನವಾಗಿದ್ದು, ಕಾಗಿನೆಲೆ-2 ಕ್ಷೇತ್ರದ 29/ಎ ಮತಗಟ್ಟೆಯಲ್ಲಿ (ಶೇ. 76.91) ಅತಿ ಕಡಿಮೆ ಮತದಾನವಾಗಿದೆ. ತಡಸ ಗ್ರಾಮ ಪಂಚಾಯತಿಯ ಕಾಟೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ (ಶೇ. 92.21) ಅತಿ ಹೆಚ್ಚು ಮತದಾನವಾಗಿದ್ದು, ತಡಸ-1ರ ಕ್ಷೇತ್ರದ 18/ಎ ಮತಗಟ್ಟೆಯಲ್ಲಿ (ಶೇ. 85.05) ಅತಿ ಕಡಿಮೆ ಮತದಾನವಾಗಿರುವ ಬಗ್ಗೆ ವರದಿಯಾಗಿದೆ.
ಮತಗಟ್ಟೆಗೆ ಅಧಿಕಾರಿಗಳ ಭೇಟಿ..!!
ಕಾಗಿನೆಲೆಯ ವಿವಿಧ ಮತಗಟ್ಟೆಗಳಿಗೆ ಹಾವೇರಿಯ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಭೇಟಿ ನೀಡಿ ಮತಗಟ್ಟೆಗಳಲ್ಲಿ ಕೋವಿಡ್ ನಿಯಮಾನುಸಾರ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ಉಪ ತಹಶೀಲ್ದಾರ ರವಿ ಭೋಗಾರ, ಸೆಕ್ಟರ್ ಆಫೀಸರ್ ಮಹೇಶ ಮರೆಣ್ಣನವರ, ಪಿಡಿಓ ವಿಶ್ವನಾಥ ಕಟ್ಟೆಗೌಡರ, ಕಂದಾಯ ನಿರೀಕ್ಷಕ ಆರ್.ಸಿ.ದ್ಯಾಮನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ಮಾರ್ಚ್ 31ರಂದು ಬೆಳಿಗ್ಗೆ 8ಗಂಟೆಯಿಂದ ಮತಗಳ ಎಣಿಕೆ ಕಾರ್ಯ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ನಡೆಯಲಿದೆ.