ಗ್ರಾ.ಪಂ.ಚುನಾವಣೆ ಡಿ.೩೦ರ ಮತ ಏಣಿಕೆಗೆ ಅಧಿಕಾರಿಗಳಿಗೆ ಸಿಬ್ಬಂದಿಗೆ ತರಬೇತಿ

ದೇವದುರ್ಗ.ಡಿ.೨೭-ತಾಲೂಕಿನ ೨೮ ಗ್ರಾಮ ಪಂಚಾಯಿತಿಗಳಿಗೆ ೪೮೬ ಸ್ಥಾನಗಳಿಗೆ ನಡೆದ ಚುನಾವಣೆ ಇದೇ ಡಿ. ೩೦ ರಂದು ಡಾನ್ ಬಾಸ್ಕೋ ಶಾಲೆಯಲ್ಲಿ ನಡೆಯಲಿದ್ದು, ಮತ ಏಣಿಕೆಗೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಬಾನುವಾರ ಬಸವ ಪ್ರೌಢ ಶಾಲೆಯಲ್ಲಿ ತಹಸಿಲ್ದಾರ ಮದುರಾಜ ಯಾಳಗಿ, ಹಾಗೂ ನೋಡೆಲ್ ಅಧಿಕಾರಿ ಮಾಸ್ಟರ್ ಟ್ರೇನರ್ ತರಬೇತಿ ನೀಡಿದರು.
ಒಟ್ಟು ೫೪೪ ಸ್ಥಾನಗಳ ಪೈಕಿ ೫೮ ಅವಿರೋಧ ಆಯ್ಕೆಯಾಗಿದ್ದು, ೪೮೬ ಸ್ಥಾನಗಳಿಗೆ ೨೫೦ ಮತಟ್ಟೆಯಲ್ಲಿ ಮತದಾನ ನಡೆದಿದೆ. ಒಟ್ಟು ೧೬೩೧೬೫ ಮತದಾರರಲ್ಲಿ ೧೩೦೨೩೫ ಮತ ಚಲಾವಣೆಯಾಗಿವೆ.
ಇದೇ ಡಿ. ೩೦ರಂದು ೧೨೧೪ ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದ್ದು, ಮತ ಏಣಿಕೆಗೆ ಎಲ್ಲಾ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ. ಮತ ಏಣಿಕೆ ಕಾರ್ಯಕ್ಕೆ ೭೩ ಜನ ಮೇಲ್ವಿಚಾಕರಕು, ೧೪೬ ಸಹಾಯಕ ಸಿಬ್ಬಂದಿ, ೨೮ ಚುನಾವಣಾಧಿಕಾರಿಗಳು, ೩೨ ಸಹಾಯಕ ಚುನಾವಣಾಧಿಕಾರಿಗಳು, ಚುನಾವಣಾ ಸಿಬ್ಬಂದಿ, ಕಂದಾಯ ಸಿಬ್ಬಂದಿಗಳಿಗೆ ೮ ಜನ ಮಾಸ್ಟರ್ ಟ್ರೇನರ್ ಹಾಗೂ ನೋಡೆಲ್ ಅಧಿಕಾರಿ, ತಹಸಿಲ್ದಾರ, ಗ್ರೇಡ್-೨ ತಹಸಿಲ್ದಾರ ತರಬೇತಿ ನೀಡಿದರು.
ಮತ ಏಣಿಕೆಗೆ ಡಾನ್ ಬಾಸ್ಕೋ ಶಾಲೆಯಲ್ಲಿ ಒಟ್ಟು ೧೮ ಕೊಠಡಿಗಳು, ೬೬ ಟೇಬಲ್‌ಗಳು ಮಾಡಿದ್ದು, ಕೊಠಡಿ ಸಂಖ್ಯೆ ೦೧ ರಿಂದ ೧೨ ರವರೆಗೆ ಪ್ರತಿ ಕೊಠಡಿಯಲ್ಲಿ ೪ ಟೇಬಲ್ ಹಾಗೂ ೧೩ ರಿಂದ ೧೮ ಕೊಠಡಿಗಳಲ್ಲಿ ಪ್ರತಿ ಕೊಠಡಿಯಲ್ಲಿ ೩ ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ೨೮ ಗ್ರಾಮ ಪಂಚಾಯಿತಿಗಳ ಮತ ಏಣಿಕೆ ಏಕ ಕಾಲಕ್ಕೆ ನಡೆಯಲಿದೆ. ೫೬ ಟೇಬಲ್‌ಗಳಿಗೆ ೩ ಸುತ್ತಿನ ಮತ ಏಣಿಕೆ ಹಾಗೂ ೯ ಟೇಬಲ್‌ಗಳಿಗೆ ೪ ಸುತ್ತಿನ ಮತ ಏಣಿಕೆ ನಡೆಯಲಿದೆ ಎಂದು ತಹಸಿಲ್ದಾರರು ತಿಳಿಸಿದ್ದಾರೆ.