ಗ್ರಾ.ಪಂ.ಚುನಾವಣೆಗೆ: ಮತದಾನ

ಗಂಗಾವತಿ ಡಿ.27: ತಾಲೂಕಿನ 18 ಗ್ರಾಮ ಪಂಚಾಯತಿಗಳ 156 ಮತಗಟ್ಟೆಗಳಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಎರಡನೇಯ ಹಂತದ ಮತದಾನ ಆರಂಭಗೊಂಡಿದೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.60ರಷ್ಟು ಮತದಾನವಾಗಿತ್ತು .
ಎಲ್ಲ ಮತಗಟ್ಟೆಗಳ ಸುತ್ತ 100 ಮೀಟರ್ ನಿಷೇಧ ಹೇರಲಾಗಿದೆ. ಬೆಳಗ್ಗೆ ಹೆಚ್ಚಿನ ಚಳಿ ಇದ್ದ ಕಾರಣ ಒಬ್ಬರು ಬಂದು ಮತದಾನ ಮಾಡುತ್ತಿರುವುದು ಕಂಡು ಬಂತು.
ಅಲ್ಲದೇ ಕೆಲ ಅಭ್ಯರ್ಥಿಗಳು ಮತದಾರರನ್ನು ಕರೆದುಕೊಂಡು ಹೋಗಿ ಬರಲು ಆಟೋದ ವ್ಯವಸ್ಥೆ ಮಾಡಲಾಗಿತ್ತು. ಬೂತ್ ಹೊರಗಡೆ ಅಭ್ಯರ್ಥಿಗಳು ಮತ್ತು ಏಜೆಂಟ್ ರು ಮತದಾರ ಪಟ್ಟಿ ಪರಿಶೀಲಿಸಿದರು. ಅಲ್ಲದೇ ಮತದಾನಕ್ಕೆ ಬರುವ ಮತದಾರರಿಗೆ ಪಕ್ಷದ ಚಿಹ್ನೆ ತೋರಿಸಿ ವೋಟ್ ಹಾಕಿ ಎಂದು ಮನವಿ ಮಾಡುತ್ತಿದ್ದರು.
ಕೆಸರಹಟ್ಟಿ, ಹೆರೂರು, ವೆಂಕಟಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸನಾಳ ಗ್ರಾಮದಲ್ಲಿ ಮತದಾರರು ಮತ ಹಾಕುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಸಹ ಎಲ್ಲಾ ಬೂತ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.