ಗ್ರಾ.ಪಂ.ಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು28: ತಾಲ್ಲೂಕಿನ ಆರು ಗ್ರಾಮ ಪಂಚಾಯ್ತಿಗಳಿಗೆ ಎರಡನೇ ಅವಧಿಗಾಗಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಗುರುವಾರ ನಡೆಯಿತು. ರಾಮಗೇರಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಅಡಿವೆಕ್ಕ ನಿಂಗಪ್ಪ ಬೆಟಗೇರಿ ಮತ್ತು ಉಪಾಧ್ಯಕ್ಷರಾಗಿ ಈರವ್ವ ಎಸ್. ಮಡಿವಾಳರ ಅವರು ಚುನಾವಣೆಯಲ್ಲಿ ಆಯ್ಕೆ ಆದರು. ಬಿಆರ್‍ಪಿಯ ಈಶ್ವರ ಮೆಡ್ಲೇರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಬಸಣ್ಣ ಬೆಟಗೇರಿ, ದೇವಣ್ಣ ಬೆಟಗೇರಿ, ನಾಗರಾಜ ಮಡಿವಾಳರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ ಕಾಳಿ, ಪರಶುರಾಮ ಯಂಗಾಡಿ, ಪರಶುರಾಮ ಲಕ್ಕಣ್ಣವರ, ಸುರೇಶ ಲಕ್ಕಣ್ಣವರ, ಪಿಡಿಒ ಜಗದೀಶ ಕುರುಬರ ಮತ್ತಿತರರು ಇದ್ದರು.
ಅದರಂತೆ ಸಮೀಪದ ಪುಟಗಾಂವ್‍ಬಡ್ನಿಯ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಪ್ರೇಮಕ್ಕ ಕರಡೆಪ್ಪ ಮಾದರ ಉಪಾಧ್ಯಕ್ಷರಾಗಿ ದ್ರಾಕ್ಷಾಯಣವ್ವ ಭೀಮವ್ವ ಅತ್ತಿಗೇರಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಮೃತ್ಯುಂಜಯಪ್ಪ ಗುಡ್ಡದನ್ವೇರಿ, ಪಿಡಿಒ ಎಂ.ಆರ್. ಮಾದರ ಮತ್ತು ಸದಸ್ಯರು ಇದ್ದರು.
ಇನ್ನು ಯಳವತ್ತಿ ಗ್ರಾಮ ಪಂಚಾಯ್ತಿಗೆ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ರೇಷ್ಮಾ ರಸೂಲ್‍ಸಾಬ್ ಹಳೆಮನಿ ಮತ್ತು ಉಪಾಧ್ಯಕ್ಷರಾಗಿ ಬಸವಣ್ಣೆಪ್ಪ ನೀಲಪ್ಪ ಚಿಣಗಿ ಆಯ್ಕೆ ಆದರು. ಈ ಸಂದರ್ಭದಲ್ಲಿ ಸದಸ್ಯರು ಚುನಾವಣಾಧಿಕಾರಿ ಬಿ.ಎನ್. ಗಾಯಕವಾಡ, ಪಿಡಿಒ ವೈ.ಬಿ. ಮಾದರ, ಸಿಬ್ಬಂದಿ ಇದ್ದರು.
ಅದರಂತೆ ಶಿಗ್ಲಿ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ದುಂಡವ್ವ ಫಕ್ಕೀರಪ್ಪ ಹಾದಿಮನಿ ಉಪಾಧ್ಯಕ್ಷರಾಗಿ ಶೈಲಜಾ ರಘುನಾಥ ಜನಿವಾರದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆದರು.
ಹುಲ್ಲೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಲೀಲಾ ಶಿವಣ್ಣ ತಳವಾರ ಉಪಾಧ್ಯಕ್ಷರಾಗಿ ವೀಣಾ ವೀರಣ್ಣ ಅಕ್ಕಿ ಹಾಗೂ ಆದರಹಳ್ಳಿ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ನಾಗನಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ನಾಗವ್ವ ತಿರುಮಲ್ಲಪ್ಪ ವಡ್ಡರ ಆಯ್ಕೆ ಆದರು. ಈ ಸಂದರ್ಭದಲ್ಲಿ ಸದಸ್ಯರು ಇದ್ದರು.