ಗ್ರಾ.ಪಂ.ಕಾರ್ಯದರ್ಶಿ ಮನೆ ಬಾಗಿಲು ಮೀಟಿ ಕಳ್ಳತನ

ತಿ.ನರಸೀಪುರ. ಡಿ.29 -ಗ್ರಾ.ಪಂ.ಕಾರ್ಯದರ್ಶಿಯೊಬ್ಬರ ಮನೆಯ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು ನಗದು ಹಣ ಸೇರಿದಂತೆ ಬೆಲೆ ಬಾಳುವ ಚಿನ್ನಾಭರಣಗಳನ್ನು ದೋಚಿರುವ ಘಟನೆ ಪಟ್ಟಣ ಸಮೀಪದ ಹೆಳವರಹುಂಡಿ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ದುಗ್ಗಹಳ್ಳಿಯಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಯಾಗಿರುವ ಹೆಳವರಹುಂಡಿ ಗ್ರಾಮದ ನಿವಾಸಿ ಬಸವಣ್ಣ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು 15 ಸಾವಿರ ರೂ.ನಗದು,ಒಂದು ಜೊತೆ ದೀಪಾಲೆ ಕಂಬ,ಒಂದು ಬೆಳ್ಳಿ ಮುಖವಾಡ,ಅಕ್ಷತೆ ಬಟ್ಟಲು, ಹಾಗು ಚಿನ್ನದ ಮುತ್ತಿನ ಸರ,ಜುಮುಕಿ,ಲಕ್ಷ್ಮಿ ಓಲೆ,ಒಂದು ಫ್ಯಾನ್ಸಿ ಓಲೆಯನ್ನು ಕದ್ದಿರುವುದಾಗಿ ಬಸವಣ್ಣ ಪೆÇೀಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು ಇವುಗಳ ಒಟ್ಟು ಬೆಲೆ 1 ಲಕ್ಷದ 10 ಸಾವಿರ ಎಂದು ಅಂದಾಜಿಸಲಾಗಿದೆ.
ಘಟನೆ ವಿವರ:
ಚುನಾವಣಾ ಕರ್ತವ್ಯಕ್ಕೆ ದುಗ್ಗಹಳ್ಳಿಗೆ ತೆರಳಿ ಕೆಲಸ ಮುಗಿಸಿ ಹೆಳವರಹುಂಡಿ ಗ್ರಾಮದಲ್ಲಿರುವ ಮನೆಗೆ ಬಂದು ನಂತರ ಸ್ವಗ್ರಾಮ ಹಿರಿಯೂರಿಗೆ ಹೋಗಿದ್ದರೆನ್ನಲಾಗಿದೆ.ಮಾರನೇ ದಿನ ಮದ್ಯಾನ್ಹ ಮನೆಗೆ ಬಂದು ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂತು.ಬಸವಣ್ಣರವರ ಮನೆಯ ಮುಖ್ಯದ್ವಾರದ ಬಾಗಿಲನ್ನು ಮೀಟಿದ್ದ ಕಳ್ಳರು ಮನೆ ಒಳಗೆ ಪ್ರವೇಶಿಸಿ ದೇವರ ಮನೆಯಲ್ಲಿಟ್ಟ ಬೆಲೆ ಬಾಳುವ ದೇವರ ಸಾಮಾಗ್ರಿಗಳು, ಬೆಡ್ ರೂಂ ನ ಬಾಕ್ಸ್ ಮಂಚದಲ್ಲಿಟ್ಟಿದ್ದ ಚಿನ್ನಾಭರಣಗಳು ಕಳ್ಳತನವಾಗಿದ್ದವು.
ಈ ಸಂಬಂಧ ಗ್ರಾ.ಪಂ.ಕಾರ್ಯದರ್ಶಿ ಬಸವಣ್ಣ ನೀಡಿರುವ ದೂರು ದಾಖಲಿಸಿಕೊಂಡಿರುವ ಪಿಎಸ್ ಐ ಹೆಚ್.ಡಿ.ಮಂಜಪ್ಪ ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಎಎಸ್ ಐ ಪ್ರಭಾಕರ್,ಲಿಂಗರಾಜು,ಪಚ್ಚೇಗೌಡ,ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.