ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಬಾದಾಮಿ, ಜ13- ನಮ್ಮ ಗ್ರಾಮದ ಗ್ರಾಮ ಪಂಚಾಯತದ ಕಟ್ಟಡ ಇಲ್ಲದೇ ಇರುವುದರಿಂದ ತೊಂದರೆಯಾಗಿತ್ತು. ಈಗ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ ಗ್ರಾಮ ಪಂಚಾಯತ ಕಚೇರಿಗೆ ಅನುಕೂಲವಾಗಲಿದೆ ಎಂದು ಗ್ರಾಮ ಪಂಚಾಯತ ಸದಸ್ಯ ಶಂಕರಗೌಡ ಪಾಟೀಲ ಹೇಳಿದರು.
ಅವರು ಮಂಗಳವಾರ ತಾಲೂಕಿನ ಕೆಂದೂರ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬಾಡಿಗೆ ಕಟ್ಟಡದಲ್ಲಿ ಜಾಗ ಕಡಿಮೆಯಾಗಿತ್ತು. ಈಗ ಹೊಸ ಕಟ್ಟಡವಾಗುತ್ತಿರುವುದರಿಂದ ಗ್ರಾಮದ ಜನರಿಗೆ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಬಸವಲಿಂಗಯ್ಯ ಹಿರೇಮಠ, ಸಿದ್ದು ಹದ್ಲಿ, ಸದಸ್ಯೆಯರಾದ ಲಕ್ಷ್ಮವ್ವ ಬಜೆನ್ನವರ, ಮಲ್ಲಪ್ಪ ರೇವಡಿ, ಯಲ್ಲವ್ವ ನರಸಾಪೂರ, ಹೇಮಂತ ದೂಡಮನಿ, ಪಿಡಿಒ ಶಶಿಕಲಾ ಕೂಡತಿ, ಅಭಿಯಂತರ ವಿಜಯಕುಮಾರ ಜಿಂದೆ, ಪ್ರವೀಣ ಹುಬ್ಬಣ್ಣವರ ಹಾಗೂ ಬಸವರಾಜ ಪಾತ್ರೂಟಿ ಹಾಜರಿದ್ದರು.