ಗ್ರಾ.ಪಂ. ಉಪಾಧ್ಯಕ್ಷರಿಂದ ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆ

ಕಲಬುರಗಿ:ಏ.7:ಶಿಶು ಅಭಿವೃದ್ಧಿ ಯೋಜನೆ ಕಲಬುರಗಿ ಗ್ರಾಮೀಣದ ವ್ಯಾಪ್ತಿಯಲ್ಲಿ ಬರುವ ಡೊಂಗರಗಾಂವ ವಲಯದ ಸುಲಗಿತ್ತಿತಾಂಡದಲ್ಲಿನ ಹೊಸ ಅಂಗನವಾಡಿ ಕೇಂದ್ರವನ್ನು ಕಿಣ್ಣಿಸಡಕ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶರಣಬಸಪ್ಪಾ ಎ. ಮೂಲಗಿ ಅವರು ಬುಧವಾರ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಿಣ್ಣಿಸಡಕ್ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ ಬರಗಾಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಸೀಮಾ ರಾಠೋಡ ಸೇರಿದಂತೆ ಕಿಣ್ಣಿಸಡಕ್ ಗ್ರಾಮ ಪಂಚಾಯತಿಯ ಸದ್ಯಸರು, ಸುಲಗುತ್ತಿ ಹಾಗೂ ಬಾಚನಾಳ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಮಸ್ಧರು ಉಪಸ್ಥಿತರಿದ್ದರು.