ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಗೆಲುವು


ಬಂಟ್ವಾಳ, ನ.೧- ನಾವೂರ ಗ್ರಾಮಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಬೆಂಬಲಿತರು ಹೊಂದಿದ್ದ ಭದ್ರಕೋಟೆಯನ್ನು ಒಡೆದಂತಾಗಿದೆ.  
ಒಟ್ಟು ೧೦೭೦ ಮತಗಳು ಈ ವಾರ್ಡ್‌ನಲ್ಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಪ್ಪಿ ಅವರಿಗೆ ೪೭೫ ಮತಗಳು ಲಭಿಸಿದರೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸುಮಿತ್ರಮೋಹನ್ ಅವರಿಗೆ ೩೯೨ ಮತಗಳು ಲಭಿಸಿದೆ, ೫ ಅಸಿಂಧು ಮತಗಳು ಚಲಾವಣೆ ಆಗಿವೆ. ಈ ಬಾರಿಯ ಉಪಚುನಾವಣೆಯಲ್ಲಿ ದಾಖಲೆಯ ಒಟ್ಟು ೮೭೨ ಮತಗಳು ಚಲಾವಣೆ ಆಗಿದೆ. ಕಳೆದ ೨೦ ವರ್ಷಗಳಿಂದ ದೇವಶ್ಯಪಡೂರು ವಾರ್ಡ್ ನಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಯಾಗಿ ದಾಖಲೆ ಸೃಷ್ಟಿ ಸಿತ್ತು. ಈ ಬಾರಿ ಸಂಘಟಿತ ಹೋರಾಟದ ಫಲವಾಗಿ ನಾವೂರು ಗ್ರಾ.ಪಂ.ನ ಉಪಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಪ್ಪಿ ಅವರು ೮೩ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ದೇವಶ್ಯಪಡೂರು ವಾರ್ಡ್ ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಜ್ಯೋತಿ ಅವರ ನಿಧನದ ಬಳಿಕ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಉಪತಹಶೀಲ್ದಾರ್ ನವೀನ್ ಬೆಂಜನಪದವು ಅವರ ಉಪಸ್ಥಿತಿಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ದಿನೇಶ್ ಅವರು ಚುನಾವಣಾ ಅಧಿಕಾರಿಯಾಗಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಧಾಮಣಿ ಸಹಾಯಕ ಚುನಾವಣಾ ಅಧಿಕಾರಿ ಯಾಗಿ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ನಡೆಯಿತು.