ಗ್ರಾ.ಪಂ ಆನೂರಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಅಫಜಲಪುರ:ಜು.29: ತಾಲೂಕಿನ ಆನೂರ ಗ್ರಾಮದ ಗ್ರಾಮ ಪಂಚಾಯಿತಿಗೆ ನಡೆದ ಎರಡನೇ ಅವಧಿಯ ಚುನಾವಣೆಗೆ ಹಿಂದುಳಿದ ವರ್ಗ (ಅ) ಮೀಸಲಾತಿ ಹೊಂದಿರುವ ನಿಂಗಣ್ಣ ಕಲಶೆಟ್ಟಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿ ಜಾತಿ ಮಹಿಳೆಗೆ ಮೀಸಲಿರುವ ಸ್ಥಾನಕ್ಕೆ ಅನಸುಬಾಯಿ ಬಬಲಾದ ಅವಿರೋಧ ಆಯ್ಕೆಯಾದರು.

ಒಟ್ಟು 9 ಜನ ಸದಸ್ಯರಿರುವ ಸಂಖ್ಯಾ ಬಲದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಸಲಾಗಿತ್ತು.
ಚುನಾವಣಾ ಅಧಿಕಾರಿ ಎಸ್.ಎಚ್ ಗಡಗಿಮನಿ ಅವರು 11 ಗಂಟೆಯಿಂದ 12 ರವರೆಗೆ ನಾಮಪತ್ರ ಸ್ವೀಕರಿಸಿ 2 ಗಂಟೆಗೆ ನಾಮಪತ್ರ ಪರಶೀಲನೆ ನಡೆಸಿದರು. ಬಳಿಕ 2:15 ಕ್ಕೆ ಸಭೆ ನಡೆಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹೆಸರನ್ನು ಘೋಷಿಸಿದರು.

ಈ ವೇಳೆ ಪಿ.ಡಿ.ಓ ಚಿದಾನಂದ ಆಲೇಗಾಂವ ಗ್ರಾ.ಪಂ ಸದಸ್ಯರಾದ ರೇಣುಕಾ ಕಟ್ಟಿಮನಿ, ಈರಣ್ಣ ಪೂಜಾರಿ, ಈರಣ್ಣಗೌಡ ನಾವದಗಿ, ರಾಜಶೇಖರ ಸರ್ವೋದಯ, ಅನಸುಬಾಯಿ ಪ್ರಭುಗೋಳ, ಭಾಗಮ್ಮ ಟಾಕಳೆ, ಭಾಗಮ್ಮ ಉಮ್ಮನಗೋಳ ಮುಖಂಡರಾದ ಭೀಮರಾವ ಕಲಶೆಟ್ಟಿ, ಬಾಬು ತಳವಾರ, ಚಂದ್ರಕಾಂತ ಸಿಂಗೆ, ಶರಣಪ್ಪ ಕನ್ನೊಳ್ಳಿ, ಬಲಭೀಮ ಬಳೂಂಡಗಿ, ಶೇಖರಗೌಡ ಪಾಟೀಲ, ಭೋಗಣ್ಣ ರೂಗಿ, ಹಣಮಂತ ಗೌಂಡಿ, ಕಲ್ಯಾಣಿ ಜಿರೋಳಿ, ಕರೆಪ್ಪ ಪೂಜಾರಿ, ಭಾಗಣ್ಣ ಬಳೂಂಡಗಿ, ದತ್ತು ಕಲಶೆಟ್ಟಿ, ದತ್ತು ಘಾಣೂರ, ಶ್ರೀಶೈಲ ಸ್ವಾಮಿ ಸ್ಥಾವರಮಠ, ಮಲ್ಲಣಗೌಡ ಮಾಲಿಪಾಟೀಲ, ಶ್ರೀಮಂತ ಭಂಡಾರಿ, ಶಿವಶರಣ ಪ್ಯಾಟಿ,
ಗುಂಡೂರಾವ ಮಾಳಗೆ, ಗುರುಶಾಂತ ಕಲಶೆಟ್ಟಿ, ಮಲ್ಲೇಶಿ ಉಮ್ಮನಗೋಳ ಅನೇಕರಿದ್ದರು.