
ತುಮಕೂರು, ಜು. ೨೦- ಬಿಜೆಪಿ ಶಾಸಕರಿರುವ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಪಾರುಪತ್ಯ ಸಾಧಿಸುತ್ತಿದ್ದು, ಗೂಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗಾ ಉಪಾಧ್ಯಕ್ಷ ಸ್ಥಾನ, ಅರೆಯೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ ಹಾಗೂ ಕೆ. ಪಾಲಸಂದ್ರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಬಿದ್ದಿವೆ.
ಮಾಜಿ ಶಾಸಕ ಡಿ ಸಿ ಗೌರೀಶಂಕರ್ ಅವರ ಸೂಚನೆಯಂತೆ ಗೂಳೂರು ಜಿಲ್ಲಾ ಪಂಚಾಯ್ತಿ ಉಸ್ತುವಾರಿ ಜಿ. ಪಾಲನೇತ್ರಯ್ಯ ಉಸ್ತುವಾರಿಯಲ್ಲಿ ಜೆಡಿಎಸ್ ಪಕ್ಷ ಜಯಭೇರಿ ಸಾಧಿಸಿದೆ.
ಗೂಳೂರು ಗ್ರಾಮ ಪಂಚಾಯ್ತಿ ಜೆಡಿಎಸ್ ಪಾಲಾಗಿದ್ದು, ಜೆಡಿಎಸ್ ಪಕ್ಷದ ರೇಣುಕಮ್ಮ,ಉಪಾಧ್ಯಕ್ಷರಾಗಿ ನವೀನ್ ಗೌಡ ಆಯ್ಕೆಯಾಗಿದ್ದಾರೆ.
ಅರೆಯೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಲಲಿತ ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೆ. ಪಾಲಸಂದ್ರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ ಬಿದ್ದಿದ್ದು, ಜೆಡಿಎಸ್‌ನ ಬಸವರಾಜು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಗೂಳೂರು ಜಿಲ್ಲಾ ಪಂಚಾಯಿತಿ ಉಸ್ತುವಾರಿ ಜಿ.ಪಾಲನೇತ್ರಯ್ಯ ಮಾತನಾಡಿ, ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದ ಅರಿಯೂರು ಗ್ರಾಮ ಪಂಚಾಯಿತಿಯು ಅನ್ಯ ಪಕ್ಷಗಳ ಹಿಡಿತದಲ್ಲಿತ್ತು. ಆದರೆ ಅರಿಯೂರು ವೈದ್ಯನಾಥೇಶ್ವರನ ಕೃಪೆ ಹಾಗೂ ಡಿ.ಸಿ.ಗೌರಿಶಂಕರ್ ಅವರು ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ಪರಿಣಾಮ ಈ ಬಾರಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅರಿಯೂರು ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ನಡೆಸಲಿದ್ದಾರೆ. ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಅವರ ಅಭಿವೃದ್ದಿ ಕಾಮಗಾರಿಗಳು ಈ ಬಾರಿ ಪಂಚಾಯ್ತಿ ಆಡಳಿತದಲ್ಲಿ ಜೆಡಿಎಸ್ ಪಕ್ಷ ಜಯಭೇರಿ ಸಾಧಿಸಲು ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ಜೆಡಿಎಸ್ ಗೆಲುವಿಗೆ ಸಹಕರಿಸಿದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಅಭಿನಂದೆನೆ ಸಲ್ಲಿಸಿದರು.