ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಸನ್ಮಾನ


ಹುಬ್ಬಳ್ಳಿ,ಆ.3: ಕೋಳಿವಾಡ ಗ್ರಾಮ ಪಂಚಾಯತಗೆ ಚುನಾವಣೆ ಅಧಿಕಾರಿ ರಾಜಶೇಖರ್ ಅನುಗೌಡರ್ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 14 ಜನ ಸದ್ಯಸ್ಯರು ಇರುವ ಗ್ರಾ. ಪಂ ಅಧ್ಯಕ್ಷರಾಗಿ ಕಾಂಗ್ರೆಸನ ಬಸವರಾಜ ಶಿವಪ್ಪ ಜಂತಲಿ ಹಾಗೂ ಉಪಾಧ್ಯಕ್ಷರಾಗಿ ಶ್ರೀದೇವಿ ಗುಡ್ಡಮ್ಮನವರ ಆಯ್ಕೆಗೊಂಡರು, ಇವರನ್ನು ಶಾಸಕ ಎನ್ ಹೆಚ್ ಕೋನರೆಡ್ಡಿ ಪಕ್ಷದ ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಶೇಕಣ್ಣ ಕಣವಿ, ಈಶ್ವರಪ್ಪ ಮಂಟೂರ್, ದ್ಯಾವಪ್ಪ ಗಾಣಿಗೇರ, ಬಸಪ್ಪ ನರೇಗಲ್, ಡಿ.ಜಿ ಜಂತಲಿ, ಮುತ್ತಣ್ಣ ಬಾಡಿನ, ಮಂಜುನಾಥ್ ತತ್ತಿ, ಮಂಜುನಾಥ್ ಸೊರಟೂರ್, ವೀಕ್ಷಕ ಪ್ರಕಾಶಗೌಡ ಪಾಟೀಲ ಗ್ರಾಮದ ಕಾಂಗ್ರೆಸ್ ನಾಯಕರು ಅಭಿನಂದಿಸಿದ್ದಾರೆ, ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದ್ದಾರೆ,