(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು29: ತಾಲೂಕಿನ ಮಾಸಣಗಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ರೇಣುಕಾ ಜಗದೀಶ ತಗಡಿನಮನಿ ಮತ್ತು ಉಪಾಧ್ಯಕ್ಷರಾಗಿ ನೀಲಗಿರಿಯಪ್ಪ ಕಾಕೋಳ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಕುರಬರ ತಿಳಿಸಿದರು.
ಗುರುವಾರ ಮಾಸಣಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೇಣುಕಾ ಜಗದೀಶ ತಗಡಿನಮನಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೀಲಗಿರಿಯಪ್ಪ ಕಾಕೋಳ 7 ಮತಗಳನ್ನು ಹಾಗೂ ನೇತ್ರಾ ಸೋಮಪ್ಪ ಕಳಕನವರ 6 ಮತಗಳನ್ನು ಪಡೆದಿದ್ದು, ಅಂತಿಮವಾಗಿ ಒಂದು ಮತದ ಅಂತರದಿಂದ ನೀಲಗಿರಿಯಪ್ಪ ಕಾಕೋಳ ಜಯಶಾಲಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶೇಖಪ್ಪ ಅಳಲಗೇರಿ, ಸದಸ್ಯರಾದ ಬಸವರಾಜ ಬನ್ನಿಹಟ್ಟಿ, ಮಲ್ಲೇಶಪ್ಪ ಬಣಕಾರ, ಶಿವರಾಜ ಬನ್ನಿಹಟ್ಟಿ, ನಾಗರಾಜ ಕೊರ್ಲಿ, ರೇಣುಕಮ್ಮ ಪಡಿಯಣ್ಣನವರ, ಪಾರ್ವತೆವ್ವ ಚಿಕ್ಕಮ್ಮನವರ, ಮಮತಾ ಕೋಣನವರ, ಯಶೋದಾ ಕಮತರ, ಗದಿಗೆವ್ವ ಹಿರೇಮಠ ಮುಖಂಡರಾದ ಪ್ರಕಾಶ ಬನ್ನಿಹಟ್ಟಿ, ಉಳಿವೆಪ್ಪ ಕುರವತ್ತಿ, ಪಿಡಿಒ ಬಸವರಾಜ ಬಣಕಾರ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.