ಗ್ರಾ.ಪಂ. ಅಧಿಕಾರಕ್ಕಾಗಿ ಹೊಂದಾಣಿಕೆ ಕಾಂಗ್ರೆಸ್ ಬಿಜೆಪಿ ಅಪವಿತ್ರ ಮೈತ್ರಿ :ಯಾಳಗಿ

ಶಹಾಪುರ:ಜ.2:ಇತ್ತಿಚೆಗೆ ನೆಡೆದ ಸ್ಥಳಿಯ ಗ್ರಾ.ಪಂ. ಚುನಾವಣೆಗಳಲ್ಲಿ ಆಡಳಿತ ರೂಡ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು. ಗ್ರಾ.ಪಂ. ಅಧಿಕಾರಕ್ಕಾಗಿ ಹೊಂದಾಣಿಕೆ ರಾಜಕೀಯ ಮುಂದುವರೆದಿದೆ ಎಂದು ಜೆಡಿಎಸ್, ಮುಖಂಡರಾದ ಅಮೀನರಡ್ಡಿ ಯಾಳಗಿ ಆರೋಪ ವ್ಯಕ್ತಪಡಿಸಿದರು.

ನಗರದ ಅವರ ನಿವಾಸದಲ್ಲಿ ಪತ್ರಕರ್ತರೊಂದಿಗೆ ಈ ಕುರಿತು ಮಾತನಾಡಿ. ಶಹಾಪುರ ಮತಕ್ಷೇತ್ರದಲ್ಲಿ ಜೆಡಿಎಸ್ ಅತ್ಯಧಿಕ ಗ್ರಾ.ಪಂ.ಗಳಲ್ಲಿ ಗೆಲ್ಲುವ ಸೂಚನೆಗಳಿಂದ ಈ ಮೈತ್ರಿ ಕಾರ್ಯಕ್ಕೆ ಕೈಹಾಕಿದ್ದರು. ಎಂದ ಅವರು ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಮತ ಕ್ಷೇತ್ರದ ಹಲವಾರು ಗ್ರಾ.ಪಂ.ಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಅಲ್ಪಪ್ರಮಾಣದ ಮತಗಳ ಅಂತರಗಳಿಂದ ಪರಾಜಿತಗೊಂಡಿದ್ದರೆ. ಅದು ಸೊಲಲ್ಲವೆಂದು ಅವರು ಸಮರ್ಥಿಸಿಕೊಂಡರು. ಸಗರ, ಗೋಗಿ, ವಿಬೂತಹಳ್ಳಿ. ಎಗ್ಗಣದೊಡ್ಡಿ, ಜೈನಾಪುರ ಏವೂರ, ಮಾಲಗತ್ತಿ. ಯಕ್ತಾಪುರ, ಕಡಕಲ್. ರಸ್ತಾಪುರ, ಮಡ್ನಾಳ. ಉಕ್ಕಿನಾಳ. ಸೇರಿದಂತೆ ಅನೇಕ ಗ್ರಾ.ಪಂ.ಗಳಲ್ಲಿ ಜೆಡಿಎಸ್ ಸದಸ್ಯರು ಜಯ ಸಾಧಿಸಿದ್ದು ತೃಪ್ತಿ ತಂದಿದೆ. ಇದೊಂದು ಮುಂದಿನ ಜಿ.ಪಂ, ತಾ.ಪಂ. ಹಾಗೂ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದ ಅವರು, ಯಾಳಗಿ ಗ್ರಾ.ಪಂ.ಯಲ್ಲಿ ಯಾವುದೆ ಪಕ್ಷದ ಬೆಂಬಲಿತ ಸದಸ್ಯತ್ವ ಹೊಂದಿಲ್ಲ ಅದೊಂದು ಪಕ್ಷಾತೀತ ಸದಸ್ಯರ ಗ್ರಾ.ಪಂ.ಯಾಗಿದೆ ಎಂದು ತಿಳಿಸಿದರು.

ಒಟ್ಟು ಶಹಾಪುರ ಮತಕ್ಷೇತ್ರ ವ್ಯಾಪ್ತಿಯಲ್ಲಿ 75ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್ ವಿಜಯ ಸಾಧಿಸಿದೆ. ಕನಿಷ್ಟ 90ಕ್ಕೂ ಹೆಚ್ಚು ಸ್ಥಾನಗಳ ತಿವೃ ಪೈಪೊಟಿಯಲ್ಲಿ ಸ್ವಲ್ಪ ಅಂತರದ ಮತಗಳಿಂದ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸುವದು ಆಗಲಿಲ್ಲ. ಈ ಅಪವಿತ್ರ ರಾಜಕಾರಣದಿಂದ ಜನ ಸಾಮಾನ್ಯರ ವಿಶ್ವಾಸಗಳಿಗೆ ದಕ್ಕೆ ಉಂಟಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಮತದಾರರು ಮೈತ್ರಿ ರಾಜಕಾರಣಕ್ಕೆ ತೆರೆ ಏಳೆಯಲ್ಲಿದ್ದಾರೆ ಎಂದು ಅಮೀನರಡ್ಡಿ ನುಡಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರಾದ ಬಸವರಾಜ ವಿಬೂತಹಳ್ಳಿ. ಬಸನಗೌಡ ಹಾರಣಗೇರಾ, ತಿರುಪತಿ ಸೇರಿ ಸಗರ. ತಿರುಪತಿ ಪರಡ್ಡಿ ಸೇರಿದಂತೆ ಇತರೆ ಜೆಡಿಎಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.