ಗ್ರಾಹಕ ಸಂರಕ್ಷಣಾ ಕಾಯ್ದೆ-2019:ಜು. 2 ರಂದು ದೂರದರ್ಶನ ಚಂದನವಾಹಿನಿಯಲ್ಲಿ ಸಂವಾದ ಪ್ರಸಾರ

ಕಲಬುರಗಿ,ಜು.01:ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಿಂದ “ಗ್ರಾಹಕ ಸಂರಕ್ಷಣಾ ಕಾಯ್ದೆ 2019″ರ ಪರಿಧಿಗೆ ಒಳಪಡುವ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ದೂರದರ್ಶನ ಸಂಸ್ಥೆಯಿಂದ ರಿಜಿಸ್ಟ್ರಾರ ಹಾಗೂ ಆಡಳಿತಾಧಿಕಾರಿ ವಿಜಯಕುಮಾರ್ ಅವರೊಂದಿಗೆ ನಡೆಸಿರುವ ಸಂವಾದವು ಜುಲೈ 2 ರಂದು ಭಾನುವಾರ ಸಂಜೆ 6 ಗಂಟೆಯಿಂದ 6.30 ಗಂಟೆಯವರೆಗೆ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ.

ಪಕ್ಷಕಾರರು, ವಕೀಲರು ಹಾಗೂ ಸಾರ್ವಜನಿಕರು ದೂರದರ್ಶನ ಚಂದನವಾಹಿನಿಯಲ್ಲಿ ಈ ಸಂವಾದವನ್ನು ವೀಕ್ಷಿಸಿ ಸದುಪÀಯೋಗ ಪಡೆದುಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಒಡೆಯರ್ ಅವರು ತಿಳಿಸಿದ್ದಾರೆ.