ಗ್ರಾಹಕಸ್ನೇಹಿ ಯೋಜನೆಗಳ ಮೂಲಕ ಜನರನ್ನು ತಲಪುತ್ತಿದ್ದೇವೆ-ಪಾಟೀಲ್

ಸಿರವಾರ,ಸೆ.೧೨-
ಪಟ್ಟಣದ ಸಿರವಾರ ಸ್ನೇಹ ಸಮೃದ್ಧಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ’ ದ ೧ ನೇ ವರ್ಷದ ಸರ್ವ ಸದ್ಯಸರ ವಾರ್ಷಿಕ ಮಹಾಸಭೆಯು ಸಹಕಾರಿ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾದ ಸಂದೀಪ ಪಾಟೀಲ ನಂದರಡ್ಡಿ ಮಾತನಾಡಿ ಸಹಕಾರಿಯು ಆರ್ಥಿಕ ರಂಗದಲ್ಲಿ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಗ್ರಾಹಕಸ್ನೇಹಿ ಯೋಜನೆಗಳಿಂದ ಸಹಕಾರಿ ಜನಮನ್ನಣೆಯತ್ತ ಸಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಉತ್ತಮ ಆರ್ಥಿಕ ವಹಿವಾಟು ನಡೆಸಿ, ಲಾಭದತ್ತ ಯಶಸ್ವಿ ಹೆಜ್ಜೆಗಳನ್ನಿಡುತ್ತಿದೆ ಎಂದರು.
ಉಪಾಧ್ಯಕ್ಷರದ ಶಂಕರ ಗೌಡ ಚಾಗಬಾವಿ, ಮಹ್ಮದ್ ಶರೀಫ್ ವಕೀಲರು, ಶ್ರೀನಿವಾಸ, ಅಶೋಕ್ ಪಾಟೀಲ್ ತುಪ್ಪದೂರು , ಇಮಾಮ್, ಎನ್ ಬಸವರಾಜ ವಕೀಲರು, ಅಧಿಕಾರಿಗಳಾದ ಬಸ್ಸಯ್ಯ ಸ್ವಾಮಿ, ವಿನೋದ್ ಪಾಟೀಲ್ ಸೇರಿದಂತೆ ಸಿಬ್ಬಂದಿ ಹಾಗು ಸಹಕಾರಿ ಯ ಸದಸ್ಯರು, ಗ್ರಾಹಕರು ಇದ್ದರು.