ಗ್ರಾಹಕರ ಹಿತರಕ್ಷಣೆ ಜಾಗೃತಿ

ಬೀದರ:ಮಾ.15:ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬೀದರ
ಸರ್ಕಾರಿ ಪ್ರೌಢಶಾಲೆ ನೌಬಾದ ಬೀದರ
ಗ್ರಾಹಕರ ಕ್ಲಬ್ ಮತ್ತು ಮತದಾರ ಜಾಗೃತಿ ಸಂಘದ ವತಿಯಿಂದ ಸರ್ಕಾರಿ ಪ್ರೌಢಶಾಲೆ ನೌಬಾದ ನಲ್ಲಿಂದು ಗ್ರಾಹಕರ ಹಿತರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮ ಆಚರಿಸಲಾಯಿತು .
ಶ್ರೀ ಬಿ ಸುಬ್ರಮಣ್ಯಂ ಪ್ರಭು,ನಿರ್ದೇಶಕರು, ಸಹರ್ದಾ ತರಬೇತಿ ಸಂಸ್ಥೆ ಡಿಸಿಸಿ ಬ್ಯಾಂಕ್ ನಿ,ಬೀದರ ಅವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಹಾಗೂ ವಿಶೇಷ ಉಪನ್ಯಾಸದಲ್ಲಿ ಗ್ರಾಹಕರಿಗಾಗುವ ಮೋಸ .ಪರಿಹಾರ ಪಡೆಯುವ ರೀತಿಯ ಕುರಿತು ಸುದೀರ್ಘವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾದ ಶ್ರೀ ಜಗನ್ನಾಥ ಅವರು ಮಾನವೀಯ ಮೌಲ್ಯಗಳು ಬೆಳೆಸಿಕೊಂಡು ಉತ್ತಮ ಮಾನವರಾಗಲು ಮಕ್ಕಳಿಗೆ ಕರೆಕೊಟ್ಟರು. ಕಾರ್ಯಕ್ರಮದ ಘನಾಧ್ಯಕ್ಷತೆ ಶಾಲೆಯ ಮುಖ್ಯಗುರುಗಳಾದ ಶ್ರೀ ವಿಶ್ವನಾಥ ಸ್ವಾಮಿ ಅವರು ವಹಿಸಿದ್ದರು . ಅಂಕುಶ ಬಿರಾದಾರ ಸ್ವಾಗತಿಸಿದರು ಶ್ರೀಮತಿ ಮಾಧುರಿ ಎಸ್ ಕೆ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀ ರವಿ ಕೆ ವಂದಿಸಿದರು.
8,9,10 ನೇ ತರಗತಿಯ ನೂರಕ್ಕೂ ಅಧಿಕ ಮಕ್ಕಳು ಹಾಜರಿದ್ದರು ಹಾಗೂ ಶಾಲೆಯ ಸಿಬ್ಬಂದಿ ಭಾಗಿಯಾಗಿದ್ದರು.