ಗ್ರಾಹಕರ ಹಿತದೃಷ್ಟಿಯಿಂದ ದಿ ಲೀಗಲ್ ಮೆಟ್ರಾಲಜಿ ಆಕ್ಟ್ ಅಂಡ್ ರೂಲ್ಸ್ ಜಾರಿ

ದಾವಣಗೆರೆ. ಏ.೨೦: ಕಾನೂನು ಮಾಪನ ಶಾಸ್ತ್ರ ಇಲಾಖೆಯು (ತೂಕ ಮತ್ತು ಅಳತೆ) ಗ್ರಾಹಕರ ಹಿತ ದೃಷ್ಠಿಯಿಂದ ‘ದಿ ಲೀಗಲ್ ಮೆಟ್ರಾಲಜಿ ಆ್ಯಕ್ಟ್ ಅಂಡ್ ರೂಲ್ಸ್’ ಕಾಯಿದೆ ನಿಯಮಗಳನ್ನು ನಿಯತಕಾಲಿಕವಾಗಿ ಜಾರಿಗೊಳಿಸುತ್ತಿದೆ. ಕಾಯಿದೆಯನ್ವಯ ಪ್ರಮುಖವಾಗಿ ವ್ಯಾಪಾರ ಉದ್ದಿಮೆಗಳಲ್ಲಿ ಬಳಸುವ ತೂಕ, ಅಳತೆ, ಸಾಧನಗಳನ್ನು ಅವುಗಳ ನಿಖರತೆಗಾಗಿ ಇಲಾಖೆಯಿಂದ ವರ್ಷಕ್ಕೆ/ಎರಡು ವರ್ಷಕ್ಕೊಮ್ಮೆ ಪರಿಶೀಲಿಸಿ ಮುದ್ರೆ ಹಾಕಿಸಿಕೊಂಡು ಉಪಯೋಗಿಸುವುದು ಮತ್ತು ಅವುಗಳ ಸತ್ಯಾಪನಾ ಪ್ರಮಾಣ ಪತ್ರವನ್ನು ತಮ್ಮ ವ್ಯಾಪಾರ ಸ್ಥಳಗಳಲ್ಲಿ ಗ್ರಾಹಕರ ವೀಕ್ಷಣೆಗಾಗಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಇಲಾಖಾ ಮುದ್ರೆಯಿಲ್ಲದ ಇತರೆ ಯಾವುದೇ ತೂಕ/ಅಳತೆ/ಸಾಧನಗಳನ್ನು ವ್ಯಾಪಾರ ವಹಿವಾಟುಗಳಲ್ಲಿ ಉಪಯೋಗಿಸಿ ಗ್ರಾಹಕರಿಗೆ ಮೋಸ ಮಾಡುವುದು ಮೇಲೆ ಹೇಳಿದ ಕಾನೂನಿನನ್ವಯ ದಂಡಾರ್ಹ ಹಾಗೂ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಪೊಟ್ಟಣ ಸಾಮಗ್ರಿ ನಿಯಮಗಳು-2011ನ್ನು ಸಹ ಇಲಾಖೆಯು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದು, ಪ್ರಮುಖವಾಗಿ ರಿಟೇಲ್ ಪೊಟ್ಟಣಗಳ ಮೇಲೆ ಕಡ್ಡಾಯ ಘೋಷಣೆಗಳಾದ ಆಮದುದಾರರ/ತಯಾರಕರ/ಪ್ಯಾಕರ್‌ರವರ ಹೆಸರು ಮತ್ತು ಪೂರ್ಣ ವಿಳಾಸ, ಗ್ರಾಹಕರ ದೂರಿಗೆ ಸಂಬAಧಿಸಿದAತೆ ಸಂಪರ್ಕಿಸಬಹುದಾದ ದೂ.ಸಂಖ್ಯೆ, ಇ-ಮೇಲ್ ವಿಳಾಸ, ಪದಾರ್ಥದ ಹೆಸರು, ನಿವ್ವಳ(ತೂಕ/ಅಳತೆ/ಸಂಖ್ಯೆ-ಮೆಟ್ರಿಕ್ ಮಾನಗಳಲ್ಲಿ), ತಯಾರು ಮಾಡಿದ ತಿಂಗಳು ಮತ್ತು ವರ್ಷ, ಗರಿಷ್ಠ ಮಾರಾಟ ಚಿಲ್ಲರೆ ದರ ರೂ.ಗಳಲ್ಲಿ (ಎಲ್ಲಾ ತೆರಿಗೆಗಳು ಸೇರಿ), ಅಗತ್ಯವಿರುವಲ್ಲಿ ಪದಾರ್ಥದ ಅಳತೆ ಇತ್ಯಾದಿ (ಮೆಟ್ರಿಕ್ ಮಾನಗಳಲ್ಲಿ) ಇರಬೇಕು. ದಿನ ನಿತ್ಯದ ವ್ಯವಹಾರಗಳಲ್ಲಿ ಹಣ್ಣು, ತರಕಾರಿ ಮಾರುವ ಬೀದಿ ವ್ಯಾಪಾರಸ್ಥರು, ದಿನಸಿ, ಸೂಪರ್ ಮಾರ್ಕೆಟ್, ಪೆಟ್ರೋಲ್ ಬಂಕ್, ಕೈಗಾರಿಕೋದ್ಯಮಗಳ ವೇ-ಬ್ರಿಡ್ಜ್, (ಸ್ಯಾಂಡ್, ಮೈನಿಂಗ್ ಸ್ಟೋನ್ ಕ್ವಾರೆ ಸೇರಿದಂತೆ) ಕೆ.ಎಫ್.ಸಿ.ಎಸ್.ಸಿ ನ್ಯಾಯಬೆಲೆ ಅಂಗಡಿಗಳು, ಮಲ್ಟಿ ನ್ಯಾಷನಲ್ ಕಂಪೆನಿಗಳ ಉತ್ಪನ್ನಗಳು ಸೇರಿದಂತೆ ಗ್ರಾಹಕರಿಗೆ ಸಂಭವಿಸಬಹುದಾದ ಮೋಸಗಳನ್ನು ತಡೆಗಟ್ಟಲು ಸುಮೋಟೋ ತಪಾಸಣೆಗಳನ್ನು ನಡೆಸಿ, 2020-21ನೇ ಸಾಲಿನಲ್ಲಿ ಈ ಕೆಳಕಂಡAತೆ ಕಾನೂನು ಕ್ರಮ ಜರುಗಿಸಲಾಗಿದೆ.ಕಾನೂನು ಕ್ರಮ: ಸತ್ಯಾಪನೆಗೊಳಪಡಿಸಿ, ನಿಖರತೆ ದೃಢೀಕರಿಸಿದ ತೂಕಗಳು 7783 ಮತ್ತು ಅಳತೆಗಳು 826. ಹಾಗೂ ಸಾಧನಗಳ ತೂಕಗಳು 19262 ಮತ್ತು ಅಳತೆಗಗಳು 2424 ಒಟ್ಟು 30295. ನಡೆಸಿದ ಒಟ್ಟು ತಪಾಸಣೆಗಳು 1601. ಪತ್ತೆ ಹಚ್ಚಿದ ಅಪರಾಧಗಳು/ಹೂಡಿದ ಮೊಕದ್ದಮೆಗಳು 484. ಇತ್ಯರ್ಥಗೊಳಿಸಿದ ಮೊಕದ್ದಮೆಗಳು 481. ವಿಧಿಸಿದ ದಂಡ ರೂ.893300, ಸಂಗ್ರಹಿಸಲಾದ ಸತ್ಯಾಪನಾ ಶುಲ್ಕ ರೂ.12169352 ಆಗಿರುತ್ತದೆ. ಅಳತೆ ಮತ್ತು ಮಾಪನಗಳಿಗೆ ಸಂಬAಧಿಸಿದ ಅಪರಾಧಗಳ ಬಗ್ಗೆ ಲಿಖಿತ ದೂರುಗಳಿಗಾಗಿ ಕಾನೂನು ಮಾಪನಶಾಸ್ತç, ಸಹಾಯಕ ನಿಯಂತ್ರಕರ ಕಚೇರಿ, ರೇಷ್ಮೆ ಇಲಾಖೆ ಎದುರು, ಎ.ಪಿ.ಎಂ.ಸಿ ಆವರಣ ದಾವಣಗೆರೆ ದೂ.ಸಂ: 8050024760 ನ್ನು ಸಂಪರ್ಕಿಸಬಹುದೆAದು ಕಾನೂನು ಮಾಪನಶಾಸ್ತç ಸಹಾಯಕ ನಿಯಂತ್ರಕ ಹೆಚ್.ಎಸ್.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.