ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದಬಳೆ ಕಳ್ಳತನ

ಕಲಬುರಗಿ,ಮೇ 17 : ನಗರದ ತನಿಷ್ಕ ಜ್ಯುವೆಲರಿ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನದ ಬಳೆ ಕಳ್ಳತನ ಮಾಡಿಕೊಂಡು ಹೋದ ಘಟನೆ ಇತ್ತೀಚಿಗೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಕಳುವಾದ ಚಿನ್ನದ ಬಳೆಯ ಮೌಲ್ಯ 2.5 ಲಕ್ಷ ರೂ ಎಂದು ತಿಳಿದುಬಂದಿದೆ.
ಬುರ್ಖಾ ಧರಿಸಿ ಬಂದ ಇಬ್ಬರು ಮಹಿಳೆಯರು ಚಿನ್ನಾಭರಣ ನೋಡುವಾಗ ಕೈಯಲ್ಲಿ ಚಿನ್ನದ ಬಳೆ ಹಿಡಿದುಕೊಂಡಿದ್ದು,ಈ ವೇಳೆ ಅಂಗಡಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ನಮಗೆ ಯಾವುದು ಇಷ್ಟವಾಗುತ್ತಿಲ್ಲವೆಂದು ಚಿನ್ನದ ಬಳೆ ಹಿಡಿದುಕೊಂಡು ಹೊರಗೆ ಹೋಗಿದ್ದಾರೆ.
ಕಳ್ಳತನ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಬ್ರಹ್ಮಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.