ಗ್ರಾಹಕರ ಸೋಗಲ್ಲಿ ಕಳ್ಳತನ

ಅರಕೇರಾ,ಜು.೧೫-
ಪಟ್ಟಣದ ಬಸವ ವೃತ್ತದ ಹತ್ತಿರವಿರುವ ಶ್ರೀ ಮೌನೇಶ್ವರ ಜ್ಯೂವೇಲರಿಯಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನ ಕಳ್ಳತನ ಮಾಡಿರುವ ಘಟನೆ ಗುರುವಾರ ನಡೆದಿದೆ.
ಮೌನೇಶ ಮಾನಪ್ಪಗೆ ಸೇರಿದ ಜ್ಯೂವೇಲರಿ ಅಂಗಡಿಯಲ್ಲಿ ೧೦ ಗ್ರಾಂ.ನ ಒಂದು ಸುತ್ತು ಉಂಗುರ, ೫ ಗ್ರಾಂ.ನ ಮೂರು ಸುತ್ತು ಉಂಗುರಗಳನ್ನು ಕದ್ದಿದ್ದಾರೆ. ದೇವದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಐ ಕೆ.ಹೊಸಕೇರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.