ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಕುಮಾರ್ ಆಯ್ಕೆ

ಹೂವಿನಹಡಗಲಿ ನ 15 : ಪಟ್ಟಣದ ಗ್ರಾಹಕರ ಸಹಕಾರ ಸಂಘದ (ಪುಟ್ಟಪ್ಪನ ಸೊಸೈಟಿ) ಅಧ್ಯಕ್ಷರಾಗಿ ಪರಶೆಟ್ಟಿ ಶಿವಕುಮಾರ್, ಉಪಾಧ್ಯಕ್ಷರಾಗಿ ಆರ್.ಚೈತನ್ಯ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಬಿ.ಕೆ. ಬಡಿಗೇರ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಸದಸ್ಯ ಸೊಪ್ಪಿನ ಮಂಜುನಾಥ, ಮುಖಂಡರಾದ ಅಟವಾಳಗಿ ಕೊಟ್ರೇಶ, ಸೋಗಿ ಹಾಲೇಶ ಹಾಗೂ ಸಂಘದ ನಿರ್ದೇಶಕರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.