ಗ್ರಾಹಕರ ಸಹಕಾರವೇ ಉದ್ಯಮ ಬೆಳೆಯಲು ಶ್ರೀರಕ್ಷೆ*

ಶಿವಮೊಗ್ಗ.ಮೇ.೧೭: ಉದ್ಯಮಗಳು ಯಶಸ್ವಿಯಾಗಿ ನಡೆಯಲು ಗ್ರಾಹಕರ ಸಲಹೆ ಹಾಗೂ ಸಹಕಾರ ಅತ್ಯಂತ ಮುಖ್ಯ. ಸಾರ್ವಜನಿಕರು ಸಂಘ ಸಂಸ್ಥೆಗಳ ಸಹಕಾರದಿಂದ 24 ವರ್ಷ ಯಶಸ್ವಿಯಾಗಿ ಪೂರೈಸಿರುವುದು ಸಂತೋಷದ ಸಂಗತಿ ಎಂದು ಮಥುರಾ ಪ್ಯಾರಾಡೈಸ್ ಮತ್ತು ಮಥುರಾ ರೆಸಿಡೆನ್ಸಿ ಮಾಲೀಕ ಎನ್.ಗೋಪಿನಾಥ್ ಹೇಳಿದರು.ಮಥುರಾ ಗ್ರೂಪ್ಸ್ 25ನೇ ವರ್ಷಕ್ಕೆ ಪಾದಾರ್ಪಾಣೆ ಮಾಡಿರುವ ಹಿನ್ನೆಯಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, 25 ವರ್ಷಕ್ಕೆ ನಮ್ಮ ಸಂಸ್ಥೆ ಕಾಲಿಟ್ಟಿದ್ದು, ಜನರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಿಂದ ಉದ್ಯಮ ಯಶಸ್ವಿಯಾಗಿದೆ ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣಶೆಟ್ಟಿ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಗೋಪಿನಾಥ್ ಯಶಸ್ವಿಯಾಗುವ ಜತೆಯಲ್ಲಿ ವಿವಿಧ ಸಮಾಜಮುಖಿ ಸಂಘಟನೆಗಳಲ್ಲಿ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ. ಉದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ವಿಯಾಗಲಿ ಎಂದು ಆಶಿಸಿದರು.ವಾಣಿಜ್ಯ ಸಂಘ, ಪ್ರವಾಸೋದ್ಯಮ ಸಂಘಟನೆ, ಸಮಾಜಮುಖಿ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಗೋಪಿನಾಥ್ ಅವರು ಉತ್ತಮ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ. ವಿಜಯ್‌ಕುಮಾರ್, ನಿರ್ದೇಶಕ ಇ. ಪರಮೇಶ್ವರ್, ರಮೇಶ್ ಹೆಗಡೆ, ಗಣೇಶ ಅಂಗಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.