ಗ್ರಾಹಕರ ಸಹಕಾರದಿಂದ ಮಾತ್ರ ಬ್ಯಾಂಕಿನ ಏಳಿಗೆ ಸಾಧ್ಯ – ಕೃಷ್ಣ

ಮಾನ್ವಿ,ಜು.೨೮- ದೇಶದಲ್ಲಿ ಇದುವರೆಗೂ ೨೮ ರಾಷ್ಟೀಕೃತ ಬ್ಯಾಂಕ್‌ಗಳು ಇದ್ದವು ಆದ್ದರೆ ಇಂದು ಕೇವಲ ೮ ಬ್ಯಾಂಕ್‌ಗಳು ಮಾತ್ರ ಉಳಿದಿವೆ ಸಾಕಲದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ಮಾತ್ರ ಬ್ಯಾಂಕ್‌ಗಳು ಉಳಿಯಲು ಸಾಧ್ಯ ಬ್ಯಾಂಕಿನ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದರ ಜೊತೆಯಲ್ಲಿ ಗ್ರಾಹಕಾರ ಕುಂದು ಕೊರತೆಗಳನ್ನು ತಿಳಿದು ಪರಿಹಾರವನ್ನು ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಏಕಕಾಲದಲ್ಲಿ ರೈತರ ಸಂಧ್ಯಾ ಶಿಬಿರವನ್ನು ಆಯೋಜಿಸಲಾಗಿದೆ. ಬ್ಯಾಂಕ್ ನಿಂದ ರೈತರಿಗೆ ಶೇ ೭ರ ಬಡ್ಡಿ ದರದಲ್ಲಿ ೩ಲಕ್ಷದವರೆಗೂ ಸಾಲವನ್ನು ನೀಡಲಾಗುತ್ತಿದೆ
ಕೃಷಿ ಅಭಿವೃದ್ದಿಗಾಗಿ ದಾಖಲೆಗಳನ್ನು ನೀಡಿ ಕೃಷಿ ಸಮೃದ್ದಿ ಯೋಜನೆಯಲ್ಲಿ ಎಕರೆಗೆ ೬೫ಸಾವಿರದವರೆಗೆ ಸಾಲವನ್ನು ಪಡೆಯಬಹುದು ಎಂದು ವ್ಯವಸ್ಥಾಪಕ ಕೃಷ್ಣ ಹೇಳಿದರು.
ತಾಲೂಕಿನ ಅಮರಾವತಿ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಮಾನವಿ ಶಾಖೆವತಿಯಿಂದ ನಡೆದ ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮವನ್ನು ಪ್ರಾದೇಶಿಕ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಬಂಗಾರದ ಅಡಮಾನ ಸಾಲ ೧.೬೦ಸಾವಿರದ ವರೆಗೆ ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಕೃಷಿ ಸಾಲವನ್ನು ಪಡೆಯಬಹುದು. ಟ್ರಾ?ಯಕ್ಟರ್, ಗೋದಾಮು, ಬೀಜಸಂಸ್ಕಾರಣೆಗಾಗಿ ಕೂಡ ಸಾಲವನ್ನು ಪಡೆಯಬಹುದು. ಕುರಿಸಾಕಣೆ, ಹೈನುಗಾರಿಕೆ, ತರಬೇತಿ ನೀಡಿ ಅರ್ಥಿಕ ನೇರವನ್ನು ಕೂಡ ಒದಗಿಸುವ ಮೂಲಕ ಸ್ವಾವಲಂಭಿ ಜೀವನ ನಡೆಸಲು ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಾಸ ಮಾಲಿಪಾಟೀಲ್ ಮಾತನಾಡಿ ದೇಶದ ೧೩೫ ಕೋಟಿ ಜನಸಂಖ್ಯೆಗೆ ಅಗತ್ಯವಿರುವ ಆಹಾರವನ್ನು ಬೇಳೆಯುವ ರೈತನಿಗೆ ಕೃಷಿ ವಿಜ್ಞಾನಿಗಳ ತಂತ್ರಜ್ಞಾನ ಹಾಗೂ ಬ್ಯಾಂಕ್‌ಗಳ ಆರ್ಥಿಕ ನೆರವಿನಿಂದ ರೈತ ಕೃಷಿ ಉತ್ಪನ್ನಗಳನ್ನು ಉತ್ಪದಿಸಲು ಸಾಧ್ಯವಾಗುತ್ತಿದೆ ಸರಕಾರದಿಂದ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆತಾಗ ಮಾತ್ರ ಕೃಷಿಯಲ್ಲಿ ಹೆಚ್ಚಿನ ಅದಾಯವನ್ನು ರೈತರು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಬ್ಯಾಂಕ್‌ನಲ್ಲಿ ಉತ್ತಮ ವ್ಯವಹಾರ ಮಾಡಿದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು ಬ್ಯಾಂಕ್ ನಿಂದ ಕುರಿಸಾಕಣಿಕೆ ತರಬೇತಿ ಪಡೆದ ೨೮ ಜನರಿಗೆ ಸಾಲ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಸಾಲಪತ್ರ ವಿಭಾಗದ ವ್ಯವಸ್ಥಾಪಕರಾದ ಬಿಪೂಲ್ ಕುಮಾರ್ ದೇಬ್,ಮಾನ್ವಿ ಶಾಖೆಯ ವ್ಯವಸ್ಥಾಪಕರಾದ ಸಾಂಬಶಿವರಾವ್, ಎಸ್.ಬಿ.ಐ.ಬ್ಯಾಂಕಿಂಗ್ ಸಾಕ್ಷರತ ಅಧಿಕಾರಿ ಚಂದ್ರಶೇಖರಯ್ಯ ಸೊಪ್ಪಿಮಠ,ಉಪ ವ್ಯವಸ್ಥಾಪಕರಾದ ಯಲಪ್ಪ, ಪಿ.ಡಿ.ಒ.ಅಧಿಕಾರಿ ಬಸಯ್ಯ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಯೇಸು,ಉಪಾಧ್ಯಕ್ಷರಾದ ಹುಸೇನಿ, ಹಾಗೂ ಗ್ರಾಮದ ರೈತರು ಇದ್ದರು.